ನಿವೃತ್ತಿ ಹೊಂದಿ ಊರಿಗೆ ಮರಳಿದ ಯೋಧನಿಗೆ ಅದ್ದೂರಿ ಸ್ವಾಗತ

0 658

ರಿಪ್ಪನ್‌ಪೇಟೆ: ದೇಶದ ಗಡಿ ಪ್ರದೇಶದ ರಕ್ಷಣೆಗಾಗಿ ಸೈನಿಕ ಸೇವೆಗೆ ಕಳೆದ 40 ವರ್ಷಗಳ ಕಾಲ ತೊಡಗಿಕೊಂಡು ನಿವೃತ್ತಿ ಹೊಂದಿ ಊರಿಗೆ ಮರಳಿದ ಕಲ್ಲೂರು ಬೂದ್ಯಪ್ಪಗೌಡ ಇವರನ್ನು ಕುಟುಂಬಸ್ಥರು ಹಾಗೂ ಕಲ್ಲೂರು ಗ್ರಾಮಸ್ಥರು, ಒಕ್ಕಲಿಗ ಸಮಾಜದವರು ರಿಪ್ಪನ್‌ಪೇಟೆಯ ವಿನಾಯಕ ದೇವಸ್ಥಾನದ ಬಳಿ ಅದ್ದೂರಿಯಾಗಿ ಸ್ವಾಗತಿಸಿ ಮೆರವಣಿಗೆಯ ಮೂಲಕ ವಿನಾಯಕ ವೃತ್ತದ ಬಳಿ ಪಟಾಕಿ ಸಿಡಿಸಿ ಭವ್ಯ ಸ್ವಾಗತ ಮಾಡುವುದರೊಂದಿಗೆ ನಿವೃತ್ತಿ ಜೀವನಕ್ಕೆ ಶುಭಕೋರಿದರು.

ಕುಗ್ರಾಮವಾದ ಕಲ್ಲೂರು ಗ್ರಾಮದ ಯುವಕ ಸೈನಿಕ ಸೇವೆಗಾಗಿ ಕಳೆದ 40 ವರ್ಷದ ಹಿಂದೆ ಸೇರಿ ಈಗ ನಿವೃತ್ತಿ ಹೊಂದಿ ಹುಟ್ಟೂರಿಗೆ ಮರಳುತ್ತಿದ್ದಾರೆ. ಇವರ ಸೈನಿಕ ಸೇವೆಯೊಂದಿಗೆ ಗಡಿಪ್ರದೇಶದಲ್ಲಿನ ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿ ನಿವೃತ್ತರಾಗಿ ಊರಿಗೆ ಮರಳುತ್ತಿರುವ ಬೂದ್ಯಪ್ಪಗೌಡ ಕಲ್ಲೂರು ಇವರಿಗೆ ಭಗವಂತ ಸುಖ, ಶಾಂತಿ, ಸಂವೃದ್ಧಿ, ಆರೋಗ್ಯ ಭಾಗ್ಯ ಕರುಣಿಸಲೇದು ಪ್ರಾರ್ಥಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಲ್ಲೂರು ನಿವೃತ್ತ ಸೈನಿಕ ಬೂದ್ಯಪ್ಪಗೌಡ ಕುಟುಂಬದವರು ಮತ್ತು ಒಕ್ಕಲಿಗ ಸಮಾಜದ ಅಧ್ಯಕ್ಷ ಎಂ.ಬಿ.ಲಕ್ಷ್ಮಣಗೌಡ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವಾಸಪ್ಪಗೌಡ, ಸಮಾಜದ ಮುಖಂಡ ರವಿ ಕೆರೆಹಳ್ಳಿ, ಎಂ.ಬಿ.ಮಂಜುನಾಥ, ಕೆರೆಹಳ್ಳಿ ಮುರುಳಿ, ಪರಮೇಶ ತಳಲೆ, ಹಾಲಪ್ಪಗೌಡ ಬೈರಾಪುರ, ಪ್ರಮೀಣ ಎಲ್.ಗೌಡರು, ಟೇಕೇಶಪ್ಪಗೌಡ ಬೈರಾಪುರ, ವೆಂಕಟೇಶ ಹಾಲುಗುಡ್ಡೆ, ಕಲ್ಲೂರಿನ ಸಹಕಾರಿ ದುರೀಣ ಕೆ.ಎಸ್.ಲೋಕಪ್ಪಗೌಡ, ಕಾಂಗ್ರೆಸ್ ಮಖಂಡ ಕಲ್ಲೂರು ತೇಜಮೂರ್ತಿ, ನಿವೃತ್ತ ಸೈನಿಕ ಶಿವಪ್ಪ ರಾವಣಕಟ್ಟೆ, ಇನ್ನಿತರ ಒಕ್ಕಲಿಗ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!