ಪರಿಸರ ಸ್ನೇಹಿ ಕೃಷಿ ಅಳವಡಿಸಿಕೊಂಡರೆ ಭವಿಷ್ಯದ ಜನಾಂಗಕ್ಕೆ ಆರೋಗ್ಯ ಪೂರ್ಣ ಜಗತ್ತನ್ನು ಕೊಡಬಹುದು

0 27

ಹೊಸನಗರ: ಪರಿಸರವನ್ನು ಉಳಿಸಿಕೊಂಡು, ಪರಿಸರ ಸ್ನೇಹಿ ಕೃಷಿಯನ್ನು, ಅಳವಡಿಸಿಕೊಂಡರೆ ಭವಿಷ್ಯದ ಜನಾಂಗಕ್ಕೆ ಆರೋಗ್ಯ ಪೂರ್ಣ ಜಗತ್ತನ್ನು ಕೊಡಬಹುದು ಎಂದು ಲೇಖಕಿ ಶಶಿಕಲಾ ಅಭಿಪ್ರಾಯಪಟ್ಟರು.

ಅವರು ಆತ್ಮ ಯೋಜನೆಯಡಿ ಕೃಷಿ ಇಲಾಖೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಗಣೇಶ ಜೆ ಕಮ್ಮಾರ್ ಮಾತನಾಡಿ, ರೈತರು ವಾಣಿಜ್ಯ ಬೆಳೆಗಳಿಗೆ ಮಾರು ಹೋಗದೆ, ಆಹಾರ ಬೆಳೆಗಳತ್ತ ಹೆಚ್ಚು ಗಮನ ಹರಿಸಬೇಕು, ಪರಿಸರ ಪೂರಕ ಕೃಷಿ ಕೈಗೊಳ್ಳಬೇಕು ಎಂದು ಕರೆ ಇತ್ತರು.

ಕೃಷಿ ಅಧಿಕಾರಿ ಪ್ರತಿಮಾ ಇಲಾಖಾ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನಡಲಾಯಿತು. ಅಭಿಷೇಕ್ ಪರಿಸರ ಗೀತೆ ಹಾಡಿದರು. ಕೃಷಿ ಅಧಿಕಾರಿ ಸುಬ್ರಹ್ಮಣ್ಯ ಸ್ವಾಗತಿಸಿ, ವಂದಿಸಿದರು.

Leave A Reply

Your email address will not be published.

error: Content is protected !!