ಗೃಹಲಕ್ಷ್ಮಿ ಹಣ ಬಾರದಿದ್ದಲ್ಲಿ ಏನು ಮಾಡಬೇಕು…? ಇಲ್ಲಿದೆ ಮಾಹಿತಿ

0 497

ಶಿವಮೊಗ್ಗ: ಲಕ್ಷಾಂತರ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗಿದ್ದರೂ ಕೂಡ ಇದುವರೆಗೂ ಅಸಂಖ್ಯಾತ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. 1.1 ಕೋಟಿ ಮಹಿಳೆಯರು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಯೋಜನೆ ಜಾರಿಯಾಗಿ ಒಂದು ವಾರ ಕಳೆದರೂ ಹಣ ಬಾರದ ಕಾರಣ ಮಹಿಳೆಯರು ಗೃಹಲಕ್ಷ್ಮಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಇಷ್ಟಕ್ಕೂ ಗೃಹಲಕ್ಷ್ಮೀಯ ಹಣ ಖಾತೆಗೆ ಬಾರದೇ ಇದ್ದ ಮಹಿಳೆಯರು ಏನು ಮಾಡ್ಬೇಕು? ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿಯೂ ನಿಮಗೆ ಹಣ ಬರುತ್ತಿಲ್ಲವಾದರೆ ಸರ್ಕಾರವೇ ನಿಮಗೊಂದು ಸಹಾಯವಾಣಿ ಸಂಖ್ಯೆಯನ್ನು ತಿಳಿಸಿದೆ. ನಿಮ್ಮ ಪಡಿತರ ಚೀಟಿ, ಬ್ಯಾಂಕ್ ಅಕೌಂಟ್, ಆಧಾರ್ ನಂಬರ್ ಮಿಸ್ ಮ್ಯಾಚ್ ಆಗಿದ್ದಲಿ ಇದರ ಮಾಹಿತಿಯನ್ನು ನೀಡಲು ಇಲಾಖೆ ಸಹಾಯವಾಣಿಯ ನಂಬರ್ ವೊಂದನ್ನು ನೀಡಿದೆ. ಅರ್ಜಿಯ ಸ್ಟೇಟಸ್ ಪರಿಶೀಲಿಸಲು ಈ ಸಹಾಯವಾಣಿ ನೆರವಾಗಲಿದೆ.

8147500500 ಈ ನಂಬರ್ ಗೆ ನಿಮ್ಮ ಆಧಾರ್ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ಮೆಸೆಜ್ ಮಾಡಿ. ಹೀಗೆ ಮೆಸೆಜ್ ಮಾಡಿದ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆ ಆಧರಿಸಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಂದೇಶ ಬರಲಿದೆ. ಆ ಮೂಲಕ ನೀವು ನಿಮಗೆ ಯಾವ ಕಾರಣಕ್ಕಾಗಿ ಹಣ ಬರುತ್ತಿಲ್ಲ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ ಅದನ್ನು ಸರಿಪಡಿಸಿಕೊಳ್ಳಬಹುದಾಗಿದೆ. ನಿಮ್ಮ ಎಲ್ಲಾ ಪ್ರಶ್ನೆಗೂ ಈ ನಂಬರ್ ಮೆಸೆಜ್ ನಲ್ಲಿ ಮಾಹಿತಿ ಸಿಗಲಿದೆ.

ನಿಮ್ಮ ಅರ್ಜಿ ಅಸ್ವೀಕೃತವಾಗಿದ್ದರೇ, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆಯೂ ಮಾಹಿತಿ ಬರಲಿದೆ. ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಹೆಸರನ್ನು ತಿದ್ದುಪಡಿ ಮಾಡಿಸಲು ಸೆಪ್ಟೆಂಬರ್ 1 ರಿಂದ 10 ರವರೆಗೆ ಅವಕಾಶ ನೀಡಲಾಗಿತ್ತು. ಈಗ ಅವಧಿಯನ್ನು ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 1.28 ಫಲಾನುವಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 1.11 ಕೋಟಿ ಮಹಿಳೆಯರು ಮಾತ್ರ ನೋಂದಣಿಯನ್ನು ಮಾಡಿಸಿ ಕೊಂಡಿದ್ದಾರೆ. ಹೀಗಾಗಿ ಸರ್ಕಾರ ಗೃಹಲಕ್ಷ್ಮೀ ನೋಂದಣಿಗೆ ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿಲ್ಲ.

Leave A Reply

Your email address will not be published.

error: Content is protected !!