ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ಓರ್ವ ಸ್ಥಳದಲ್ಲೇ ಸಾವು !

0 745

ಸಾಗರ: ಸಿಮೆಂಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಸಾಗರ ತಾಲ್ಲೂಕಿನ ಕಾರ್ಗಲ್ ಬಳಿಯ ಇಡುವಾಣಿ ಎಂಬಲ್ಲಿ ಇಂದು ಸಂಜೆ 4:30 ರ ಸುಮಾರಿಗೆ ಈ ಘಟನೆ ನಡೆದಿದ್ದು ಸಿಮೆಂಟ್ ಚೀಲಗಳನ್ನೂ ತುಂಬಿದ ಲಾರಿ (KA 15 A 1383) ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ರಸ್ತೆ ಬದಿಗೆ ಪಲ್ಟಿ ಹೊಡೆದಿದೆ.

ಅಪಘಾತದಲ್ಲಿ ತಾಳಗುಪ್ಪ ಅಂಬೇಡ್ಕರ್ ಕಾಲೋನಿ ನಿವಾಸಿ ರಾಮು ಎಂಬಾತ ಲಾರಿಗೆ ಸಿಕ್ಕಿ ಮೃತ ಪಟ್ಟಿದ್ದಾನೆ. ಚಾಲಕ ಸೇರಿ ಇನ್ನುಳಿದವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದು ಅಪಘಾತ ಸ್ಥಳಕ್ಕೆ ಕಾರ್ಗಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave A Reply

Your email address will not be published.

error: Content is protected !!