ಅಂತರಾಷ್ಟ್ರೀಯ ಮಟ್ಟದಲ್ಲಿ ಅಗರ್‌ವುಡ್ ಉತ್ಪನ್ನಗಳಿಗೆ ಬಹುಬೇಡಿಕೆ ; ಶಂಕರಣ್ಣ

0
409

ರಿಪ್ಪನ್‌ಪೇಟೆ: ರೈತರು ಬೆಳೆಗಳ ಬೆಲೆ ಇಲ್ಲದೆ ಸಾಕಷ್ಟು ಸಂಕಷ್ಟ ಎದುರಿಸುವ ಸ್ಥಿತಿ ಎದುರಾಗುತ್ತಿದ್ದರೂ ಕೂಡಾ ತಮ್ಮ ಜಮೀನಿನಲ್ಲಿ ಉಪಬೆಳೆಗಳನ್ನು ಬೆಳೆದು ಆರ್ಥಿಕ ಸ್ವಾವಲಂಬನೆ ಹೊಂದಬೇಕು ಆ ನಿಟ್ಟಿನಲ್ಲಿ ಅಡಿಕೆ ರಬ್ಬರ್ ಕಾಳು ಮೆಣಸು ಮತ್ತು ಶುಂಠಿ ಹೀಗೆ ಹತ್ತು ಹಲವು ಬೆಳೆಗಳನ್ನು ಬೆಳೆಯುವುದು ಇತ್ತೀಚೆಗೆ ಅಗತ್ಯವಾಗಿದೆ ಅದರೊಂದಿಗೆ ತಮ್ಮ ಜಮೀನಿನಲ್ಲಿ ಅಗರ್‌ವುಡ್ ಬೆಳೆಯನ್ನು ಹಾಕುವುದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಇದೆ ಇದರಿಂದ ರೈತರು ಆರ್ಥಿಕವಾಗಿ ಉನ್ನತಿ ಹೊಂದಲು ಸಹಕಾರಿಯಾಗುವುದೆಂದು ಸಾಗರ ತಾಲ್ಲುಕ್ ಅಗರ್‌ವುಡ್ ಪ್ರವರ್ತಕ ಶಂಕರಣ್ಣ ಅಭಿಪ್ರಾಯಪಟ್ಟರು.

ಇಲ್ಲಿನ ಸುಳಕೋಡು ಗ್ರಾಮದ ಪ್ರಗತಿಪರ ರೈತ ಶೃಂಗೇರಿ ಜಯಪ್ರಕಾಶ್‌ರವರ ಅಗರ್‌ವುಡ್ ತಾಕಿನಲ್ಲಿ ವನದುರ್ಗಿ ಅಗರ್‌ವುಡ್ ಮರಗಳ ಕಟಾವು ಮತ್ತು ಸಂಸ್ಕರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಈ ಬೆಳೆಗೆ ಯಾವುದೇ ಸೌಲಭ್ಯಗಳಿಲ್ಲ, ಆದರೂ ರೈತರು ತಮ್ಮ ಜಮೀನಿನಲ್ಲಿ ಅಗರ್‌ವುಡ್ ಮರಗಳನ್ನು ಬೆಳೆಸುವುದರಿಂದ ಹೆಚ್ಚು ಲಾಭವಾಗುವುದು ಮರದ ಉತ್ಪನ್ನವನ್ನು ಮಾರಾಟ ಮಾಡುವುದು ಕಷ್ಟವಿಲ್ಲ. ಕಾರಣ ರೈತರು ತಮ್ಮ ಜಮೀನಿನಲ್ಲಿನ ಆರ್.ಟಿ.ಸಿ ಯಲ್ಲಿ ಬೆಳೆ ನಮೂದಾಗಿದ್ದರೆ ಕಂಪನಿಯವರು ನೇರವಾಗಿ ರೈತರ ಮನೆಗಳಿಗೆ ಭೇಟಿ ನೀಡಿ ಖರೀದಿಸುವ ವ್ಯವಸ್ಥೆಯಿದೆ. ಈ ಬೆಳೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸುವುದು ಅಲ್ಲದೆ ಉದ್ಯೋಗವನ್ನು ಅರಸಿ ವಿದ್ಯಾವಂತರು ರೈತಾಪಿ ವರ್ಗ ಹೆಚ್ಚು ಅಲೆದಾಡುವ ಬದಲು ಸ್ಥಳೀಯವಾಗಿ ಸ್ವಾಲಂಭಿ ಉದ್ಯೋಗ ಪಡೆಯಲು ಸಹಕಾರಿಯಾಗುವುದು ಎಂದ ಅವರು ಮಳೆಗಾಲದ ಮೂರು ತಿಂಗಳು ಕೆಲಸ ಮಾಡುವ ಅಗತ್ಯ ಇಲ್ಲ ಉಳಿದಂತೆ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಸಲು ಸಹಕಾರಿಯೆಂದರು.

ಈಗಾಗಲೇ ಪ್ರಪಂಚದಲ್ಲಿ ಅಗರ್‌ವುಡ್ ಆಯಿಲ್‌ನಲ್ಲಿ ಮೂರನೇ ಸ್ಥಾನ ಪಡೆದಿದ್ದು, ಮಲೆನಾಡಿನ ಹವಾಗುಣಕ್ಕೆ ಅನುಗುಣವಾಗಿ ಫಲವತ್ತಾಗಿ ಬೆಳೆಯುತ್ತದೆ ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಬೇಡಿಕೆ ಬರುತ್ತಿದೆ ಎಂದರು.

ವನದುರ್ಗಿ ಅಗರ್‌ವುಡ್ ಮರಗಳ ಕಟಾವು ಮತ್ತು ಸಂಸ್ಕರಣೆ ಕಾರ್ಯಕ್ರಮವನ್ನು ರಿಪ್ಪನ್‌ಪೇಟೆ ಸಮೀಪದ ಸುಳಕೋಡು ಗ್ರಾಮದ ಪ್ರಗತಿಪರ ರೈತ ಶೃಂಗೇರಿ ಜಯಪ್ರಕಾಶ್‌ರವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ತಾಲ್ಲೂಕು ಅಗರ್‌ವುಡ್ ಪ್ರವರ್ತಕ ಮಂಜುನಾಥಭಟ್, ವನದುರ್ಗಿ ಅಗರ್‌ವುಡ್ ಸಂಸ್ಥೆಯ ನಿರ್ದೇಶಕ ಧಮೇಂದ್ರ ಕುಮಾರ್,ಶೃಂಗೇರಿಯ ಸುಹಾಸ್ ಇನ್ನಿತರ ರೈತ ಸಮೂಹ ಉಪಸ್ಥಿತರಿದ್ದರು.

ರಾಮಣ್ಣ ಸ್ವಾಗತಿಸಿದರು. ಶೃಂಗೇರಿಯ ಸುಹಾಸ್ ವಂದಿಸಿದರು.

ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಶೃಂಗೇರಿ ಇನ್ನಿತರ ತಾಲ್ಲೂಕುಗಳ ನೂರಾರು ರೈತರು ಪಾಲ್ಗೊಂಡಿದರು.

ಜಾಹಿರಾತು

LEAVE A REPLY

Please enter your comment!
Please enter your name here