ಅಕಾಲಿಕ ಮಳೆ: ಗದ್ದೆಯಲ್ಲಿ ಮೊಳಕೆಯೊಡೆಯುತ್ತಿರುವ ಭತ್ತ !

0
519

ನರಸಿಂಹರಾಜಪುರ: ತಾಲ್ಲೂಕಿನಲ್ಲಿ ಅಕಾಲಿಕ ಮಳೆ ನಿರಂತರವಾಗಿ ಸುರಿಯುತ್ತಿದ್ದು ಕೊಯ್ಲಿಗೆ ಬಂದಿರುವ ಭತ್ತ ಅಡಿಕೆ ಕಾಫಿ ಮುಂತಾದ ಬೆಳೆಗಳು ಅದರಲ್ಲಿ ಭತ್ತದ ಪೈರು ಗದ್ದೆಯಲ್ಲಿ ಮೊಳಕೆಯೊಡೆದಿದೆ.

ತಾಲ್ಲೂಕು ಒಂದು ಕಾಲದಲ್ಲಿ ಭತ್ತದ ಕಣಜ ಎಂದು ಪ್ರಸಿದ್ಧಿ ಪಡೆದಿತ್ತು. ಶೆಟ್ಟಿಕೊಪ್ಪ, ಮುತ್ತಿನಕೊಪ್ಪ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭತ್ತದ ಕಟಾವು ಮುಗಿದು 20 ದಿನಗಳಾಗಬೇಕಿತ್ತು.‌ ಆದರೆ ಮಳೆರಾಯನ ಅಬ್ಬರದಿಂದ ಹಣ್ಣಾದ ಭತ್ತದ ತೆನೆಗಳೆಲ್ಲ ನೆಲಕಚ್ಚಿಹೋಗಿದ್ದು ಭತ್ತವನ್ನು ಯಾವುದೇ ತರಹ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದಂತ ಪರಿಸ್ಥಿತಿಯಲ್ಲಿ ಉಂಟಾಗಿದೆ.

ಕಳೆದ ವರ್ಷವು ಇದೇ ಪರಿಸ್ಥಿತಿ ಎದುರಿಸಿದ್ದ ರೈತರು ಈ ವರ್ಷವೂ ಇದೇ ಪರಿಸ್ಥಿತಿ ಎದುರಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಬಹುತೇಕ ಅಡಿಕೆ ತೋಟಗಳಲ್ಲಿ ಅಡಿಕೆ ಹಣ್ಣಾಗಿ ಉದುರುತ್ತಿವೆ. ಉದುರಿದ ಅಡಿಕೆಗಳು ನೀರು ಪಾಲಾಗುತ್ತಿವೆ. ಅಡಿಕೆಗೆ ಉತ್ತಮ ಧಾರಣೆ ಇದ್ದರು ರೈತರು ಕೊಯ್ಲು ಮಾಡಿ ಸಂಸ್ಕರಣೆ ಮಾಡಲು ಆಗುತ್ತಿಲ್ಲ.

ಅಡಿಕೆ ಕೊನೆಯನ್ನು ತೆಗೆದ ರೈತರು ಹೊಗೆ ತಟ್ಟಿಗಳಲ್ಲಿ ಒಣಗಿಸುವ ಕಾರ್ಯದಲ್ಲಿ ಮುಂದಾಗಿದ್ದು ಕಾಫಿ ಹಣ್ಣುಗಳು ಗಿಡದ ಬುಡದಲ್ಲಿ ಬಿದ್ದು ಕೊಳೆತು ಹೋಗುತ್ತಿದ್ದು, ಅವುಗಳನ್ನು ಹೆಕ್ಕಿತಂದರು ಒಣಗಿಸಲು ಬಿಸಿಲಿಲ್ಲದಂತಾಗಿದೆ. ಉದುರಿದ ಗಿಡದಲ್ಲಿ ಈಗ ಮತ್ತೆ ಹೂ ಅರಳುತ್ತಿದ್ದು ಮುಂದಿನ ವರ್ಷದ ಬೆಳೆ ಸಹ ಇಲ್ಲದಂತಾಗುವ ಪರಿಸ್ಥಿತಿ ರೈತರದ್ದಾಗಿದೆ ಇದೇ ರೀತಿ ಮಳೆ ಮುಂದುವರೆದರೆ ರೈತರ ಬಾಳು ಚಿಂತಾಜನಕವಾಗುತ್ತದೆ.

ಜಾಹಿರಾತು

LEAVE A REPLY

Please enter your comment!
Please enter your name here