ಅಕಾಲಿಕ ಮಳೆ ಹಿನ್ನೆಲೆ: ಕೃಷಿ, ತೋಟಗಾರಿಕೆ, ಅರಣ್ಯ, ಮೆಸ್ಕಾಂ ಇಲಾಖಾಧಿಕಾರಿಗಳು 24×7 ಕಾರ್ಯೋನ್ಮುಖರಾಗುವಂತೆ ಕರೆ

0
667

ಹೊಸನಗರ : ರಾಜ್ಯ ಅಕಾಲಿಕ ಮಳೆಯಿಂದ ತತ್ತರಿಸುತ್ತಿರುವ ಕಾರಣ ಕೃಷಿ, ತೋಟಗಾರಿಕೆ, ಅರಣ್ಯ, ಮೆಸ್ಕಾಂ ಇಲಾಖೆಯವರು ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು 24×7 ಕಾರ್ಯೋನ್ಮುಖರಾಗುವ ಮೂಲಕ ಪ್ರಾಮಾಣಿಕವಾಗಿ ಕರ್ತವ್ಯವೆಸಗಬೇಕೆಂದು ತಾಲೂಕು ಪಂಚಾಯಿತಿ ಆಡಳಿತ ಅಧಿಕಾರಿ ಕೆ. ಜಯಲಕ್ಷ್ಮಮ್ಮರವರು ಅಧಿಕಾರಿಗಳಿಗೆ ಕರೆ ನೀಡಿದರು.

ಅವರು ಇಂದು ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ಉದ್ದೇಶಿಸಿ ಮಾತನಾಡಿ, ಯಾವುದೇ ಹಾಗೂ ಯಾರದೇ ಒತ್ತಡಕ್ಕೆ ಸಿಲುಕದೆ ಪ್ರಾಮಾಣಿಕವಾಗಿ ಕರ್ತವ್ಯ ಎಸಗುವ ಮೂಲಕ ಅರ್ಹ ಫಲಾನುಭವಿಗಳಿಗೆ ದೊರಕಬೇಕಾದ ಸೌಲಭ್ಯವನ್ನು ತಲುಪಿಸುವ ಕಾರ್ಯದಲ್ಲಿ ತೊಡಗಬೇಕೆಂದು ಅಧಿಕಾರಿಗಳಿಗೆ ಕರೆ ನೀಡಿ, ಇನ್ನು ಮುಂದೆ ಅಧಿಕಾರಿಗಳು ತಾವು ತಮ್ಮ ಸಹಾಯಕರುಗಳನ್ನು ಸಭೆಗೆ ಕಳುಹಿಸದೇ ತಾವೇ ಸ್ವತಃ ಹಾಜರಾಗಬೇಕೆಂದು ತಾಕೀತು ಮಾಡಿದರು.

ರಾಜ್ಯದಿಂದ ಮಹಾಮಾರಿ ಕೊರೊನಾ ಹಿಮ್ಮೆಟ್ಟಿಸಲು ಆರೋಗ್ಯ ಇಲಾಖೆಯವರು ಕರ್ತವ್ಯ ಎಸಗುತ್ತಿದ್ದು ಎರಡನೇ ಡೋಸ್ ಕಡ್ಡಾಯ ನೀಡುವಲ್ಲಿ ಇನ್ನಷ್ಟು ಶ್ರಮವಹಿಸಬೇಕೆಂದು ಅವರು ಸೂಚಿಸಿ, ಈ ನಿಟ್ಟಿನಲ್ಲಿ ಜನಜಾಗೃತಿಗೊಳಿಸುವ ಕಾರ್ಯಕೈಗೊಳ್ಳಬೇಕು ಎಂದರು.

ಈಗ ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳ ಅನುಕೂಲಕ್ಕೆ ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಮೆಸ್ಕಾಂ ಇಲಾಖೆಯವರು ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕೆಂದು ಯಾವುದೇ ವ್ಯತ್ಯಯ ಆಗದಂತೆ ಎಚ್ಚರ ವಹಿಸಬೇಕೆಂದರು.

ಆಹಾರ ಇಲಾಖೆ ಸಿಬ್ಬಂದಿಗಳು ನೈಜ ಫಲಾನುಭವಿಗಳಿಗೆ ಪಡಿತರ ಚೀಟಿ ಲಭ್ಯವಾಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ಮುಖಿಗಳಾಗಬೇಕೆಂದರು.

ವಿವಿಧ ಇಲಾಖಾಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಆರ್ ಪ್ರವೀಣ್ ಸ್ವಾಗತಿಸಿ, ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here