ಅಕ್ರಮ ಮದ್ಯ ಮಾರಾಟ ಮಾಡಬೇಡಿ ಎಂದಿದಕ್ಕೆ ಮೇಳಿಗೆ ಗ್ರಾಪಂ ಪಿಡಿಒ ಮೇಲೆ ಹಲ್ಲೆ: ಆರೋಪಿ ಕೆಳಕೆರೆ ನಾಗೇಶ್ ಪೊಲೀಸರ ವಶಕ್ಕೆ !

0
961

ತೀರ್ಥಹಳ್ಳಿ: ತಾಲೂಕಿನ ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಕೆಳಕೆರೆ ನಾಗೇಶ್ ಎನ್ನುವ ವ್ಯಕ್ತಿಗೆ ಮದ್ಯ ಮಾರಾಟ ಮಾಡಬೇಡಿ ಎಂದಿದ್ದಕ್ಕೆ ಅಲ್ಲಿನ ಪಿಡಿಒ ಮೇಲೆ ಹಲ್ಲೆ ನಡೆಸಿದ್ದ ಕೆಳಕೆರೆ ನಾಗೇಶ್ ನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೇಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಕೆರೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಗೇಶನಿಗೆ ಮಹಿಳಾ ಪಿಡಿಒ ಅದರ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ನಾಗೇಶ್ ಪಿಡಿಒರವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾನೆ‌.

ನಾಗೇಶ್ ನನ್ನು ಕೊಪ್ಪ ತಾಲೂಕಿನ ಸಿದ್ಧರಮಠದಲ್ಲಿ ವಶಕ್ಕೆ ಪಡೆದಿದ್ದು ನಾಗೇಶನ ತಂದೆ ಸೀನಪ್ಪನನ್ನು ಸಹ ವಶಕ್ಕೆ ಪಡೆದಿದ್ದಾರೆ.

ಹಲ್ಲೆ ನಡೆದ ನಂತರ ಪಿಡಿಒ ನಾಗೇಶನಿಗೆ ಹಲವು ಅವ್ಯವಹಾರದ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಡಿವೈಎಸ್ಪಿ ಶಾಂತವೀರ ಅವರ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಸಿಪಿಐ ಸಂತೋಷ್ ಕುಮಾರ್, ಸುಧಾಕರ್ ಮತ್ತು ಪುನೀತ್ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here