ಅಕ್ರಮ ಮರಳು ಸಾಗಾಟ ; 04 ಟಿಪ್ಪರ್ ಲಾರಿಗಳು ವಶಕ್ಕೆ

0
1556

ಹೊಸನಗರ: ಇತ್ತೀಚೆಗಷ್ಟೆ ಹೊಸನಗರ ಠಾಣೆಗೆ ಪಿಎಸ್ಐ ಆಗಿ ಅಧಿಕಾರ ಸ್ವೀಕರಿಸಿದ ನೀಲರಾಜ್.ಬಿ ನರಲಾರ ಹಾಗೂ ಸಿಪಿಐ ಗಿರೀಶ್ ರವರಿಂದ ಅಕ್ರಮ ಮರಳು ಸಾಗಾಟದ 4 ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ತಾಲ್ಲೂಕಿನಲ್ಲಿ ಮರಳು ಮಾಫಿಯ ಬಗ್ಗೆ ಹಲವು ಸಂಘಟನೆಗಳು, ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತಿದ್ದ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿದ್ದ ಹಿಂದಿನ‌ ಪಿಎಸ್ಐ ರಾಜೇಂದ್ರ ನಾಯ್ಕ್ ಹಾಗೂ ಮಧುಸೂದನ್ ರವರು ಮರಳು ಮಾಫಿಯ ತಡೆಯುವಲ್ಲಿ ಖಡಕ್ ಅಧಿಕಾರಿಗಳಾಗಿ ಸೇವೆ ಸಲ್ಲಿದ್ದರು. ಅವರ ನಂತರ ಆಗಮಿಸಿದ ಈಗಿನ‌ ಪಿಎಸ್ಐ ನೀಲರಾಜ್ ಹಾಗೂ ಸಿ.ಪಿ.ಐ ಗಿರೀಶ್ ರವರು ಗೃಹ ಸಚಿವರ ಕ್ಷೇತ್ರದಲ್ಲಿ ಮರಳು ಮಾಫಿಯವನ್ನು ಹೇಗೆ ನಿರ್ವಹಿಸುತ್ತಾರೊ ಎಂಬ ಸಂಶಯ ಸಾರ್ವಜನಿಕರಲ್ಲಿ‌ ಹುಟ್ಟು ಹಾಕಿತ್ತು. ಈ ಅನುಮಾನವನ್ನು ಅಲ್ಲಗಳೆಯುವಂತೆ ಪಿಎಸ್ಐ‌ ಮತ್ತು ಸಿಪಿಐ ರವರು ಕಾರ್ಯ ರೂಪಿಸಿಕೊಂಡು ಅಕ್ರಮ ಮರಳು ದಂಧೆ ಮಾಡುತಿದ್ದ 4 ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಂಡು ಕೇಸ್ ದಾಖಲಿಸಿ ಮುಂದಿನ‌ ಕ್ರಮಕ್ಕೆ ತಾಲ್ಲೂಕು ತಹಶಿಲ್ದಾರವರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಮೊನ್ನೆಯಷ್ಟೆ ಅಧಿಕಾರ ಸ್ವೀಕರಿಸಿದ ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗಿರೀಶ್ ಬಿ.ಸಿ ಹಾಗೂ ಪಿಎಸ್ಐ ನಿಂಗರಾಜ್ ಬಿ‌ ನರಲಾರ ರವರು ಭರ್ಜರಿ ಕಾರ್ಯಚರಣೆ ಮಾಡುವ ಮೂಲಕ ತಾಲೂಕಿನ ಮರಳು ಮಾಫಿಯಾ ದೊರೆಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

ಅಕ್ರಮ ಮರಳು ಸಾಗಾಣಿಕೆಯ ಖಚಿತ ಮಾಹಿತಿ ಆಧಾರದ ಮೇರೆಗೆ 4 ಟಿಪ್ಪರ್ ವಶಪಡಿಸಿಕೊಳ್ಳಲಾಗಿದ್ದು, ಕಾರ್ಯಾಚರಣೆ ವೇಳೆ ವಾಹನಗಳ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ತಾಲ್ಲೂಕಿನ ಮಳಲಿ ಮತ್ತು ಜಯನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಖಚಿತ ಮಾಹಿತಿಯನ್ನು ಸಂಗ್ರಹಿಸಿದ ಇವರು ತಂಡ ರಚಿಸಿಕೊಂಡು ತಪಾಸಣೆ ನಡೆಸಿದ ಪಿಎಸ್ಐ ಮತ್ತು ಸಿಪಿಐ ರವರು ಯಾವ ಸೂಕ್ತ ದಾಖಲೆಗಳು ಲಭ್ಯವಾಗದ ಹಿನ್ನಲೆಯಲ್ಲಿ ವಾಹನಗಳನ್ನ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here