ಅಗತ್ಯವಿರುವ ಕಡೆ ಅಂಗನವಾಡಿ ನಿವೇಶನ ಮಂಜೂರಾತಿ ಮಾಡುತ್ತೇವೆ ; ಮುಖ್ಯಾಧಿಕಾರಿ ಬಾಲಚಂದ್ರಪ್ಪ

0
633

ಹೊಸನಗರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಡಿಗೆ/ಇತರೆ ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ನಿವೇಶನ ವ್ಯವಸ್ಥೆ ಒದಗಿಸಿಕೊಡುವ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪಟ್ಟಣ ಪಂಚಾಯಿತಿಗೆ ತಿಳಿಸಿದ್ದು ಅಗತ್ಯವಿರುವ ಕಡೆ ಸದಸ್ಯರ ಒಪ್ಪಿಗೆಯೊಂದಿಗೆ ನಿವೇಶನ ನೀಡುವುದಾಗಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಹೊಸನಗರ ಪಟ್ಟಣ ಪಂಚಾಯಿತಿ ಆವರಣದಲ್ಲಿಂದು ಸಾಮಾನ್ಯ ಸಭೆ ನಡೆದಿದ್ದು ಈ ಸಭೆಯಲ್ಲಿ ಅವರು ತಿಳಿಸಿದರು.

ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾರಿಗುಡ್ಡ ಹಾಗೂ ಹಳೇ ಸಾಗರ ರಸ್ತೆಯ ಆಶ್ರಯ ಕಾಲೋನಿಯಲ್ಲಿ ಅನಿಯಮಿತ ಸೈಟ್‌ಗಳನ್ನು ಹರಾಜು ಮಾಡಲು ಹಾಲಿ ಇರುವ ಸೈಟ್ ಲೇಔಟ್‌ಗಳ ಸರ್ವೆ ಮಾಡಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಅನುಮೋದನೆ ಪಡೆಯಲು ನಕ್ಷೆ ತಯಾರಿಸಲಾಗಿದ್ದು ಮುಂದಿನ ದಿನದಲ್ಲಿ 11ನೇ ವಾರ್ಡ್ ಹಾಗೂ ಹಳೇ ಸಾಗರ ರಸ್ತೆಯ ಪಟ್ಟಣ ಪಂಚಾಯಿತಿಗೆ ಸೇರಿದ ಸೈಟ್‌ಗಳನ್ನು ಹರಾಜು ಪ್ರಕ್ರಿಯೆಗೆ ಜಾಲನೆ ನೀಡಲು ಸರ್ವ ಸದಸ್ಯರು ಅನುಮೋದಿಸಿದರು.

ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪೋಸ್ಟ್ ಆಫೀಸ್ ರಸ್ತೆಯಲ್ಲಿ ನೂತನವಾಗಿ ದೈನಂದಿನ ಮಾರುಕಟ್ಟೆ ನಿರ್ಮಾಣ ಕುರಿತು ಸಭೆಯ ಗಮನಕ್ಕೆ ಉಪಾಧ್ಯಕ್ಷೆ ಕೃಷ್ಣವೇಣಿಯವರು ಗಮನಕ್ಕೆ ತಂದರೂ ಕೆಲವು ಸದಸ್ಯರಲ್ಲಿ ಸಹಮತ ಬರದೇ ಇದ್ದುದ್ದರಿಂದ ಮುಂದಿನ ಸಭೆಗೆ ಚರ್ಚಿಸಲು ತೀರ್ಮಾನಿಸಲಾಯಿತು.

ಶಿವಮೊಗ್ಗ ರಸ್ತೆಯ ಚರಂಡಿ ವ್ಯವಸ್ಥೆ ಏನು ?

ಹೊಸನಗರದ 1ನೇ ವಾರ್ಡ್‌ನ ರಾಮ ಕಾಂಪ್ಲೆಕ್ಸ್ ನಿಂದ ಚರಂಡಿಯ ನೀರು ಸರಿಯಾದ ರೀತಿಯಲ್ಲಿ ಹರಿದು ಹೋಗಲು ಶ್ರೀನಿಧಿ ಗೋಪಾಲ್ ಅಂಗಡಿಯಿಂದ ಶ್ರೀನಿವಾಸ್‌ರಾವ್ ಅಂಗಡಿಯ ವರೆಗೆ ಚರಂಡಿಯ ಕಲ್ಲುಗಳನ್ನು ತೆಗೆಸಲಾಗಿದ್ದು ಆದರೆ ರಾಜಕೀಯ ಪ್ರಭಾವದಿಂದ ಅಲ್ಲಿಯೇ ಕೆಲಸ ನಿಲ್ಲಿಸಿ ನೀರು ಎರಡೂ ದಿಕ್ಕಿಗೂ ಹೋಗದಂತೆ ಹಾಗೂ ಆರ್ ಕೆ ರಸ್ತೆಗೂ ಹೋಗದಂತೆ ತಡೆದು ನಿಲ್ಲಿಸಲಾಗಿದ್ದು ಇದರ ಬಗ್ಗೆ ಸಭೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಚರಂಡಿಯ ಕಲ್ಲುಗಳನ್ನು ತೆಗೆದು ಚರಂಡಿಯಲ್ಲಿದ್ದ ಕೆಸರನ್ನು ತೆಗೆಯಲಾಗಿದೆ ಒಂದೆರಡು ದಿನದಲ್ಲಿ ಕಲ್ಲುಗಳನ್ನು ಮುಚ್ಚಿಸಿಕೊಡುತ್ತೇವೆ ಎಂಬ ಉತ್ತರ ಬಂದಿದ್ದು ಕಲ್ಲುಗಳನ್ನು ಮುಚ್ಚಿಸಿಕೊಟ್ಟರೆ ಚರಂಡಿಯ ನೀರು ಮುಂದೇ ಹೋಗುವುದು ಹೇಗೆ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ.

ರಾಜಕೀಯ ಪ್ರಭಾವಕ್ಕೆ ಅಧಿಕಾರಿಗಳು ತಂಡ?

ಚರಂಡಿಯ ಕಲ್ಲುಗಳನ್ನು ಜೆಸಿಬಿ ಯಂತ್ರದ ಮೂಲಕ ಭಾರೀ ಹುಮಸ್ಸಿನಿಂದ ಮಳೆಯಲ್ಲಿ ನೆಂದು ಅಧಿಕಾರಿಗಳು ಕೆಲಸ ಮಾಡಿಸಿದ್ದಾರೆ. ಆದರೆ ರಾಜಕೀಯ ನಾಯಕರ ಪ್ರಭಾವದಿಂದ ಅಧಿಕಾರಿಗಳು ತಂಡ ಹೊಡೆದಿದ್ದು ಕಿತ್ತ ಕಲ್ಲುಗಳನ್ನು ಮುಚ್ಚಿದರೇ ಸಾಕು ಎಂಬ ಮಟ್ಟಕ್ಕೆ ಅಧಿಕಾರಿಗಳು ಬಂದಾಂತಾಗಿದೆ.

ಈ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಕೃಷ್ಣವೇಣಿ, ಸ್ಥಾಯಿಸಮಿತಿ ಅಧ್ಯಕ್ಷ ಸುರೇಂದ್ರ, ಗುರುರಾಜ್, ನಾಗಪ್ಪ, ಗಾಯತ್ರಿ ನಾಗರಾಜ್, ನಾಗಪ್ಪ, ಹಾಲಗದ್ದೆ ಉಮೇಶ್, ಅಶ್ವಿನಿಕುಮಾರ್, ಶ್ರಿಪತಿ ರಾವ್, ಎಂ.ಎನ್ ಸುಧಾಕರ್, ಯಾಸೀರ್, ಸಿಂಥಿಯಾ, ಚಂದ್ರಕಲಾ ನಾಗರಾಜ್, ಶಾಹಿನಾ, ಆರೋಗ್ಯಾಧಿಕಾರಿ ಪ್ರಶಾಂತ್, ಇಂಜಿನಿಯರ್ ಗಣೇಶ್ ಹೆಗ್ಡೆ, ಪರಶುರಾಮ್, ಉಮಾಶಂಕರ್, ಲಕ್ಷ್ಮಣ್, ಮಂಜುನಾಥ್, ಗಿರೀಶ್, ಬಸವರಾಜ್, ಸುಮಿತ್ರಾ, ಆಸ್ಮಾ, ನೇತ್ರಾ, ಕುಮಾರಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here