23.2 C
Shimoga
Sunday, November 27, 2022

ಅಗಲಿದ ಕಲ್ಲುಬಾಬಣ್ಣ ಕುಟುಂಬಕ್ಕೆ ಹಾಲಿ, ಮಾಜಿ ಶಾಸಕರಿಂದ ಸಾಂತ್ವನ


ರಿಪ್ಪನ್‌ಪೇಟೆ: ಇಲ್ಲಿನ ಜಿಎಸ್‌ಬಿ ಸಮಾಜದ ಪ್ರಮುಖ ಹಾಗೂ ಸಪ್ತಗಿರಿ ಟ್ರೇಡರ್ಸ್ ಮಾಲೀಕ ಸುಧೀಂದ್ರ ಪ್ರಭು (ಕಲ್ಲುಬಾಬಣ್ಣ) ಇವರ ಅಕಾಲಿಕ ನಿಧನದಿಂದಾಗಿ ಸಮಾಜಕ್ಕೆ ತುಂಬಲಾರದ ಉಂಟಾಗಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.


ಮೃತ ಕಲ್ಲುಬಾಬಣ್ಣ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ವಿಧಿಯಾಟ ಯಾರಿಗೂ ಬಿಟ್ಟಿದ್ದಲ್ಲ ಎಂದು ಹೇಳಿ ಭಗವಂತ ತಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲೆಂದು ಆಶಿಸಿದರು.


ಶಾಸಕ ಹಾಲಪ್ಪನವರೊಂದಿಗೆ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ, ಎನ್.ಸತೀಶ್,ಎಂ.ಸುರೇಶ್‌ಸಿಂಗ್, ಕೃಷ್ಣೋಜಿರಾವ್, ಎ.ಟಿ.ನಾಗರತ್ನ, ನಾಗರತ್ನದೇವರಾಜ್ ಸುಧೀಂದ್ರ ಪೂಜಾರಿ, ಪಿ.ಸುಧೀರ್, ರಾಮಚಂದ್ರ ಹರತಾಳು, ಕೆ.ಬಿ.ಹೂವಪ್ಪ, ದೇವೇಂದ್ರಪ್ಪಗೌಡ ನೆವಟೂರು, ಜಾಗದ್ದೆ ಉಮೇಶ್, ಟಿ.ಎಲ್.ಸುಂದರೇಶ್ ಇದ್ದರು.


ಇನ್ನೂ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು
ಬಾಬಣ್ಣ ಮನೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿ ಭಗವಂತ ತಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲೆಂದು ಪ್ರಾರ್ಥಿಸಿದರು.
ಬೇಳೂರು ಜೊತೆಯಲ್ಲಿ ಜಿ.ಪಂ. ಮಾಜಿ ಸದಸ್ಯ ರಾಮಚಂದ್ರ, ಕೆರೆಹಳ್ಳಿ ರವೀಂದ್ರ, ಹರೀಶ್‌ಪ್ರಭು, ಎನ್.ಚಂದ್ರೇಶ್, ಉಮಾಕರ್, ಆಶೀಫ್, ಅವಡೆ ಶಿವಪ್ಪ, ಶ್ರೀಧರ, ಉಲ್ಲಾಸ, ಇನ್ನಿತರು ಹಾಜರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!