ಅಗಲಿದ ನಾಯಕನ ಸಮಾಜಸೇವೆ ಇಂದಿನ ಯುವ ಸಮಾಜಕ್ಕೆ ಮಾದರಿಯಾಗಲಿ: ಎನ್.ಆರ್. ದೇವಾನಂದ್

0
486

ಹೊಸನಗರ: ಸಮಾಜದಲ್ಲಿ ನಾವು ಮಾಡುವ ಕೆಲಸದ ಮೇಲೆ ನಮ್ಮ ಮುಂದಿನ ನಮ್ಮ ನಂತರದ ಕೆಲಸ ನಾವು ಮಾಡಿರುವ ಸಮಾಜ ಸೇವೆ ಮಾತ್ರ ನೆನಪಿನಲ್ಲಿ ಉಳಿದುಕೊಂಡಿರುತ್ತಾದೆ ಅದೇ ರೀತಿ ಪುನೀತ್ ರಾಜ್‍ಕುಮಾರ್ ರವರು ಮಾಡಿರುವ ಧಾನ, ಧರ್ಮ ಹಾಗೂ ಸಮಾಜ ಸೇವೆ ಇಂದಿನ ಯುವ ಸಮಾಜಕ್ಕೆ ಮಾದರಿಯಾಗಿರಲಿ ಎಂದು ಅಂಬೇಡ್ಕರ್ ನಿಗಮದ ನಿರ್ದೆಶಕರಾದ ಎನ್.ಆರ್ ದೇವಾನಂದ್‌ರವರು ಹೇಳಿದರು.

ಹೊಸನಗರದ ಮಿತ್ರ ಕೂಟ ಯವಕ ಸಂಘ, ಸೈಯಾದ್ರಿ ಸಂಗಮ ಟ್ರಸ್ಟ್ ಹಾಗೂ ಕೆ.ಇ.ಬಿ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ಕೆ.ಇ.ಬಿ ಸರ್ಕಲ್ ಬಳಿ ಪುನೀತ್ ರಾಜ್‍ಕುಮಾರ್ ರವರಿಗೆ ಶ್ರದ್ಧಾಂಜಲಿ ಸೇವೆಯನ್ನು ಏರ್ಪಡಿಸಲಾಗಿದ್ದು ಈ ಸಂಧರ್ಭದಲ್ಲಿ ಮಾತನಾಡಿದರು.

ಸುಮಾರು 300ಕ್ಕಿಂತಲೂ ಹೆಚ್ಚು ದೀಪವನ್ನು ಬೆಳಗಿ ಪುನೀತ್‌ರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಿತ್ರ ಕೂಟ ಯವಕ ಸಂಘ ಅಧ್ಯಕ್ಷರಾದ ಬಿ.ಎಸ್ ವಿನಯ್ ಕುಮಾರ್ ಮತ್ತು ಸದಸ್ಯರು, ಸಂಗಮ ಟ್ರಸ್ಟ್ ಅಧ್ಯಕ್ಷರಾದ ಗಂಗಾಧರಯ್ಯ, ಕೆಇಬಿ ಗುತ್ತಿಗೆದಾರರ ಸಂಘದ ಸದಸ್ಯರಾದ ಪ್ರಶಾಂತ ಕಸಾಪ ಅಧ್ಯಕ್ಷರಾದ ಕೆ ಇಲಿಯಾಸ್ ಹಾಗೂ ಸೊನಲೆ ಶ್ರೀನಿವಾಸ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಗಲಿದ ನಾಯಕ ಮತ್ತೆ ಹುಟ್ಟಿ ಬರಲಿ ಎಂದು ಆಶಿಸಿದರು. ನೆರೆದಿದ್ದ ಅಭಿಮಾನಿಗಳು ಅವರ ಬಗ್ಗೆ ಮಾತನಾಡಿದರು. ಸರಳವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here