ಅಗ್ನಿಪಥ್ ವಿರುದ್ಧ ಹೊಸನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

0
505

ಹೊಸನಗರ: ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ತತ್ತಕ್ಷಣ ಹಿಂಪಡೆಯಲು ಆಗ್ರಹಿಸಿ ಹೊಸನಗರ ಕಾಂಗ್ರೆಸ್ ಸಮಿತಿಯವರು ಇಂದು ತಾಲೂಕು ಕಚೇರಿ ಎದರು ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಸಿದರು.

ದೇಶದ್ಯಂತ ಭಾರಿ ವಿರೋಧಕ್ಕೆ ಕಾರಣವಾಗಿರುವ ಅಗ್ನಿಪಥ್ ಯೋಜನೆ ಯುವ ಜನತೆಗೆ ಮಾರಕ ಆಗಿದೆ. ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸವಲ್ಲಿ ಕೇಂದ್ರ ರಾಜ್ಯದ ಬಿಜೆಪಿ ಸರ್ಕಾರ ತೋರಿಸಿರುವ ಮಸಾಲದಲ್ಲಿ ಅದರ ಭವಿಷ್ಯದ ಪ್ರಗತಿಯನ್ನು ಲಕ್ಷಿಸದೆ ಅಗ್ನಿ ವೀರರ ಮನೋಬಲವನ್ನು ಕುಂಠಿತಗೊಳಿಸುವಲ್ಲಿ ಆಸಕ್ತಿ ತೋರುವ ಕೇಂದ್ರ ರಾಜ್ಯ ಸರ್ಕಾರದ ನೀತಿ ಯುವಜನರನ್ನು ದಳ್ಳುರಿಗೆ ತಳ್ಳುವಂತೆ ಮಾಡಿದೆ.

ಈ ಕ್ರಮದಿಂದ ದೇಶದ ಭದ್ರತೆಗೆ ಅಪಾಯ ಉಂಟಾಗುವ ಸಂದೇಹ ಉಂಟಾಗುತ್ತದೆ ಆದ್ದರಿಂದ ದೇಶದ ರಕ್ಷಣೆಗೆ ಅಪಾಯ ತರುವ ಯೋಜನೆಯನ್ನು ತತ್ತಕ್ಷಣ ಕೈಬಿಡಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ, ಟೌನ್ ಘಟಕದ ಅಧ್ಯಕ್ಷ ಕೆ ಎಸ್ ಗುರುರಾಜ್, ಪ್ರಧಾನ ಕಾರ್ಯದರ್ಶಿ ಡಿ ಎಂ ಸದಾಶಿವ ಶ್ರೇಷ್ಠಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಚಂದ್ರಮೌಳಿ, ಎರಗಿ ಉಮೇಶ್, ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿಕುಮಾರ್, ನಾಸೀರ್, ಬಾಳೆಕೊಪ್ಪ ಗಣೇಶ್, ಬೃಂದಾವನ ಪ್ರವೀಣ್, ಚಂದ್ರಮೂರ್ತಿ, ಚನ್ನಬಸವ ಕೆರೆಕೊಪ್ಪ, ಟೀಕಪ್ಪ, ಗೋಪಾಲ ಪೂಜಾರಿ, ಲೇಖನಮೂರ್ತಿ, ಕಳೂರು ಕೃಷ್ಣಶೆಟ್ಟಿ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಧರಣಿ ಸತ್ಯಾಗ್ರಹ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here