ಅಗ್ನಿಪಥ್ ಹೆಸರಿನಲ್ಲಿ ದೇಶದ ಆಸ್ತಿ ಹಾಳು ಮಾಡುವುದನ್ನು ಸಹಿಸುವುದಿಲ್ಲ : ಬಿವೈಆರ್

0
44

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವು 8 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಇಂದು ದೇಶದಲ್ಲಿ ನೂತನವಾಗಿ ಪ್ರಾರಂಭ ಮಾಡುತ್ತಿರುವ ಅಗ್ನಿಪಥ್ ಯೋಜನೆಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ದೇಶದ ಅಸ್ತಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ಅಗ್ನಿಪಥ್ ಹೆಸರಿನಲ್ಲಿ ದೇಶದ ಆಸ್ತಿಯನ್ನು ಹಾಳುಮಡುವುದನ್ನು ಸಹಿಸುವುದಿಲ್ಲ, ಯುವ ಮೋರ್ಚಾದ ಯುವಕರು ಸರಿಯಾದ ಮಾಹಿತಿಯನ್ನು ತಲುಪಿಸುವ ಕೆಲಸವನ್ನು ಸಂಘಟನೆಯ ಜೊತೆ ಮಾಡೋಣ‌ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ತಿಳಿಸಿದರು.

ಶಿವಮೊಗ್ಗದ ರಾಯಲ್ ಅರ್ಕಿಡ್ ನಲ್ಲಿ ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ಮೋದಿ @ 8 ವರ್ಷದ ಸೇವೆ ವಿಚಾರ ಸಂಕಿರ್ಣವನ್ನು ಉದ್ಘಾಟಿಸಿ ಮಾತನಾಡಿ, ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣದ ಕೆಲಸವನ್ನು ದೇಶದ ಪ್ರಗತಿಯ ಜೊತೆಗೆ ಮಾಡುತ್ತಿದೆ, ಭಾರತೀಯರು ಹೆಮ್ಮೆ ಪಡುವ ಪ್ರಧಾನಿಯಾಗಿ ದಾಖಲೆ ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಿದ್ದಾರೆ, ಪ್ರಗತಿಯ ಕೆಲಸವನ್ನು ದೇಶದ ಜನತೆಯ ಮುಂದೆ ಇಟ್ಟಿದ್ದಾರೆ, ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಯನ್ನು ಅರ್ಪಿಸಿದ್ದಾರೆ, ಇಂದು ಪ್ರಧಾನಿ ಅವರು ಕರ್ನಾಟಕಕ್ಕೆ ಆಗಮಿಸಿ 33,000 ಕೋಟಿಗೂ ಹೆಚ್ಚು ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಕೀಲರು, ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್. ಕೆ ಸಿದ್ಧರಾಮಣ್ಣ, ಬಿಜೆಪಿ ರಾಜ್ಯ ಆರ್ಥಿಕ ಪ್ರಕೋಷ್ಠ ಸಂಯೋಜಕರಾದ ಡಾ.ಸಮೀರ್ ಕಾಗಲ್ಕರ್, ಆರ್ಥಿಕ ತಜ್ಞರಾದ ವಿಶ್ವನಾಥ್ ಭಟ್, ಭಾನುಪ್ರಕಾಶ್, ಗಿರೀಶ್ ಪಟೇಲ್, ಶಿವಮೊಗ್ಗ ಭಾರತೀಯ ಜನತಾ ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾದ ಎಂ.ಬಿ. ಹರಿಕೃಷ್ಣ, ವೈದ್ಯರು, ಉದ್ಯಮಿಗಳು ಹಾಗೂ ಯುವಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here