ಅಚ್ಚಕನ್ಯೆಗಿರಲಿಲ್ಲ ಸುಲಭ ರಸ್ತೆ ! ಆದ್ರೀಗ ರಸ್ತೆ ಮಾಡಿಕೊಟ್ಟವರ್ಯಾರು ಗೊತ್ತಾ ?

0
890

ತೀರ್ಥಹಳ್ಳಿ: ತೀರ್ಥಹಳ್ಳಿ ಎಂದೊಡನೆ ನೆನಪಾಗುವುದು ಹಚ್ಚ ಹಸಿರ ಪ್ರಕೃತಿ. ಕಾಡಿನ ನಡುನಡುವೆ ಅಲ್ಲಲ್ಲಿ ತಲೆ ಎತ್ತಿ ನಿಂತಿರುವ ಅಡಿಕೆ ತೋಟಗಳು, ಮಾರಿಗೊಂದೊಂದು ಮನೆಗಳು. ಈ ಎಲ್ಲಾ ಸೌಂದರ್ಯಕ್ಕೆ ತನ್ನದೊಂದು ಕೊಡುಗೆಯಿರಲಿ ಎಂದು ನದಿ ಸೃಷ್ಟಿಸಿರುವ ಜಲಪಾತಗಳು. ಈ ಜಲಪಾತಗಳನ್ನು ನೋಡುವುದು, ಅವುಗಳಲ್ಲಿ ಆಟವಾಡುವುದು ಎಂದರೆ ಒಂದು ಆನಂದ. ಇಂತಹ ಜಲಪಾತಗಳಲ್ಲಿ ಒಂದು ತೀರ್ಥಹಳ್ಳಿ ತಾಲ್ಲೂಕಿನ ಅಚ್ಚಕನ್ಯೆ ಜಲಪಾತ.

ನೋಡಲು ನಯನ ಮನೋಹರವಾಗಿರುವ ಈ ಜಲಪಾತ, ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 82 ಕಿ.ಮೀ ಮತ್ತು ತೀರ್ಥಹಳ್ಳಿ ತಾಲ್ಲೂಕು ಕೇಂದ್ರದಿಂದ 21 ಕಿ.ಮೀ ದೂರ ಇದ್ದು ಅರಳಸುರಳಿ ಸಮೀಪವಿದೆ.

ಸುಲಭವಾಗಿ ಹೋಗಿ ಬರಲು ರಸ್ತೆ ಸಂಪರ್ಕ ಇಲ್ಲ :

ಅಚ್ಚಕನ್ಯೆ ಜಲಪಾತಕ್ಕೆ ಉತ್ತಮ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳು ಲಭ್ಯವಾದಲ್ಲಿ ಅಚ್ಚಕನ್ಯೆ ಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ, ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯತಿಯ ಅಸಡ್ಡೆಯಿಂದ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತಿರುವ ಈ ಸಂದರ್ಭದಲ್ಲಿ ಒಬ್ಬರು ದಾನಿಗಳು ರಸ್ತೆ ಮಾಡಿ ಕೊಟ್ಟಿರುವುದಕ್ಕೆ ಗ್ರಾಮಸ್ಥರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಮಾಹಿತಿ : ಹರೀಶ್ ಮಲ್ನಾಡ್
ಜಾಹಿರಾತು

LEAVE A REPLY

Please enter your comment!
Please enter your name here