Home Sringeri ಅಡಿಕೆ ಎಲೆ ರೋಗದ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ಮುಂದುವರಿಸಬೇಕು ; ಸುಬ್ರಹ್ಮಣ್ಯ
ಶೃಂಗೇರಿ: ಅಡಿಕೆ ಹಳದಿ ಎಲೆ ರೋಗದ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ಮುಂದುವರಿಸಬೇಕು ಎಂದು ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾ ಮಂಡಳಿ ಅಧ್ಯಕ್ಷ ವೈ. ಎಸ್. ಸುಬ್ರಹ್ಮಣ್ಯ ಆಗ್ರಹಿಸಿದರು.
ಸೀತೂರು ವಿ. ಎಸ್. ಎಸ್. ಎನ್. ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ವಿ. ಎಸ್. ಎಸ್. ಎನ್. ಸಂಯುಕ್ತ ಆಶ್ರಯದಲ್ಲಿ ನಡೆದ ಅಡಿಕೆ ಹಳದಿ ಎಲೆ ರೋಗದ ಬಗ್ಗೆ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದುವರೆಗೂ ಅಡಿಕೆ ಹಳದಿ ಎಲೆ ರೋಗದ ಬಗ್ಗೆ ಸಂಪೂರ್ಣ ಸಂಶೋಧನೆ ಆಗಿಲ್ಲ. ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಅಡಿಕೆ ಹಳದಿ ಎಲೆ ರೋಗಕ್ಕೆ ಪೆಟೋ ಪಾಸ್ಮಾ ಎಂಬ ವೈರಾಣುವಿನಂದ ಈ ರೋಗ ಬರುತ್ತದೆ ಎಂದು ಅಂತಿಮವಾಗಿ ತೀರ್ಮಾಸಿದ್ದಾರೆ. ವಿಜ್ಞಾನಕ್ಕೆ ಮುಕ್ತಾಯ ಎಂಬುದು ಇಲ್ಲ. ಶೃಂಗೇರಿ, ಮೇಗುಂದ ಹೋಬಳಿಯಲ್ಲಿ ಹಳದಿ ಎಲೋ ರೋಗದ ತೋಟದ ಪಕ್ಕದಲ್ಲೇ ಈಗಲೂ ಆರೋಗ್ಯವಂತ ಅಡಿಕೆ ಮರಗಳು ಇದೆ. ಅಡಿಕೆ ಹಳದಿ ಎಲೆ ರೋಗದ ತೋಟದಲ್ಲಿ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಅಡಿಕೆ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ ಎಂದರು.
Related