ಅಡಿಕೆ ನಿಷೇಧಿಸುವಂತೆ ಜಾರ್ಖಂಡ್‌ನ ಬಿಜೆಪಿ ಸಂಸದರ ಹೇಳಿಕೆಗೆ ಬಿ.ಜಿ ಚಂದ್ರಮೌಳಿ ಖಂಡನೆ

0
436

ಹೊಸನಗರ: ಜಾರ್ಖಂಡ್ ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರು ಭಾರತ ದೇಶದಲ್ಲಿ ಅಡಿಕೆಯನ್ನು ನಿಷೇಧಿಸಬೇಕೆಂಬ ಹೇಳಿಕೆಗೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಬಿ.ಬಿ.ಚಂದ್ರಮೌಳಿಯವರು ಖಂಡಿಸಿದ್ದಾರೆ.

ಅವರು ಹೊಸನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿ, ನಿಶಿಕಾಂತ್ ದುಬೆಯವರು ಅಡಿಕೆ ನಿಷೇಧಿಸುವ ಹೇಳಿಕೆ ತಕ್ಷಣ ಹಿಂಪಡೆಯಬೇಕು ಇಲ್ಲವಾದರೆ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಅಡಿಕೆ ಬೆಳೆಗಾರರಿದ್ದು ಅವರ ಜೀವನ ಅಡಿಕೆ ಬೆಳೆಯಿಂದಲೇ ಸಾಗಿಸುತ್ತಿರುವುದರಿಂದ ನಾವೆಲ್ಲರೂ ಸೇರಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ, ನಮ್ಮ ರಾಜ್ಯದ ಬಿಜೆಪಿ ಸದಸ್ಯರ್ಯಾರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಇವರಿಗೆ ನಮ್ಮ ಅಡಿಕೆ ಬೆಳೆಗಾರರ ಬಗ್ಗೆ ಕಾಳಜಿಯೇ ಇಲ್ಲದಂತೆ ನಮ್ಮ ಸಂಸದರು ವರ್ತಿಸುತ್ತಿದ್ದಾರೆ ಎಂದರು.

ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲವೆಂಬುದನ್ನು ದಾಖಲೆಗಳ ಸಮೇತ ಸುಪ್ರೀಂಕೋರ್ಟ್’ಗೆ ಮನವರಿಕೆ ಮಾಡುವ ಕೆಲಸ ಆಗಬೇಕಾಗಿದೆ ಕೇಂದ್ರ ಸರ್ಕಾರ ಇದನ್ನು ಮಾಡಬೇಕು ಇಲ್ಲವಾದರೆ ಅಡಿಕೆ ಬಗ್ಗೆ ದಿನಕೊಬ್ಬರು ಹೇಳಿಕೆ ನೀಡಿ ಗೊಂದಲ ಸೃಷ್ಠಿಸಲಿದ್ದಾರೆ ಇದು ಮಲೆನಾಡಿನ ಜನರಿಗೆ ನುಂಗಲಾರದ ತುತ್ತಾಗುತ್ತಿದೆ ಅದು ಅಲ್ಲದೇ ಬೆಲೆಯ ಅಸ್ಥಿರತೆಗೂ ಕಾರಣವಾಗಲಿದೆ ಲಕ್ಷಾಂತರ ರೈತರ ಬದುಕಿಗೆ ಆಸರೆಯಾಗಿರುವ ಅಡಿಕೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೆ ಆದ ಗೌರವವಿದೆ ಬಿಜೆಪಿ ಸರ್ಕಾರದಲ್ಲಿ ಅಡಿಕೆ ವಿರೋಧಿಗಳು ಮುಂದುವರೆದಿದ್ದು ಅಪಪ್ರಚಾರದ ಅಭಿಯಾನ ನಡೆಸಲಾಗುತ್ತಿದೆ ಇಂಥಹ ಹೇಳಿಕೆಗಳಿಂದ ಅಡಿಕೆ ಬೆಳೆಗಾರರ ಮನೋಸ್ಥಿತಿಯನ್ನು ಕಲಕಿದಂತಾಗುತ್ತಿದೆ ಇನ್ನಾದರೂ ಇಂಥಹ ಬಲಷ ಹೇಳಿಕೆಗಳನ್ನು ನಿಲ್ಲಿಸಲಿ ಇಲ್ಲವಾದರೆ ಹೇಳಿಕೆ ನೀಡುವವರ ವಿರುದ್ಧ ಮಲೆನಾಡಿನ ಅಡಿಕೆ ಬೆಳೆಗಾರರಿಂದ ಪ್ರತಿಭಟನೆ ನಡೆಸುವುದು ಖಚಿತ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here