ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‌ಟಿ-2 ಅಡಿಯಲ್ಲಿ ವಿದ್ಯುತ್ ಉಪಯೋಗಿಸಿಲು ಅನುಮತಿ ನೀಡಿ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಪ್ರತಿಭಟನೆ

0
282

ಶಿವಮೊಗ್ಗ: ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‌ಟಿ-5 ಬದಲಾಗಿ ಎಲ್‌ಟಿ-2 ಅಡಿಯಲ್ಲಿ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು. ಸುಟ್ಟು ಹೋದ ಟಿ.ಸಿ.ಗಳನ್ನು ಕಾನೂನು ಪ್ರಕಾರ 72 ಗಂಟೆಯೊಳಗೆ ಬದಲಾವಣೆ ಮಾಡಿಕೊಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇಂದು ರೈಲ್ವೆ ನಿಲ್ದಾಣದ ಬಳಿಯ ಕೆಇಬಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ರೈತರು ಸ್ವಂತಕ್ಕಾಗಿ ಒಂದು ವರ್ಷದಲ್ಲಿ 1 ರಿಂದ 3 ತಿಂಗಳು ಮಾತ್ರ ಅಡಿಕೆ ಸುಲಿ ಯುವ ಯಂತ್ರವನ್ನು ಉಪಯೋಗಿಸುತ್ತಾರೆ. ಸ್ವಂತ ತೋಟದಿಂದ ಅಡಿಕೆ ಕೊಯ್ದು ಪರಿಷ್ಕರಣೆ ಮಾಡಿ, ಮಾರಾಟ ಮಾಡುತ್ತಾರೆ. ಈಗಾಗಲೇ ಮನೆಗಳಿಗೆ ವಿದ್ಯುತ್ ಸಂಪರ್ಕ ಇದ್ದು, ಮನೆಯ ಮೀಟರ್ ನಿಂದಲೇ ವಿದ್ಯುತ್ ಉಪಯೋಗಿಸಿ ಎಲ್‌ಟಿ ದರಪಟ್ಟಿಯಂತೆ ಬಿಲ್ ಪಾವತಿ ಮಾಡುತ್ತಿದ್ದಾರೆ ಎಂದರು.

ಈಗ ವಿದ್ಯುತ್ ಇಲಾಖೆಯವರು ಕೈಗಾರಿಕೆಗಳಿಗೆ ಉಪಯೋಗಿಸುವ ಎಲ್‌ಟಿ 5 ವಿದ್ಯುತ್ ಸಂಪರ್ಕ ಪಡೆದು ಅಡಿಕೆ ಸುಲಿಯುವ ಯಂತ್ರ ಉಪಯೋಗಿಸಬೇಕೆಂದು ತೊಂದರೆ ನೀಡುತ್ತಿದ್ದಾರೆ. ಹೊಸ ದರ ಪಟ್ಟಿ ಪ್ರಕಾರ ಇನ್ನೂ 9 ತಿಂಗಳು ರೈತರು ವಿದ್ಯುತ್ ಉಪಯೋಗಿಸದೇ ಇದ್ದರೂ ಕನಿಷ್ಠ ಶುಲ್ಕ ಕಟ್ಟಬೇಕಾಗುತ್ತದೆ. ಆದ್ದರಿಂದ ಅಡಿಕೆ ಸುಲಿಯುವ ಯಂತ್ರಕ್ಕೆ ಎಲ್‌ಟಿ-5 ಬದಲಾಗಿ ಎಲ್‌ಟಿ -2 ಅಡಿಯಲ್ಲಿ ವಿದ್ಯುತ್ ಉಪಯೋಗಿಸಲು ಅನುಮತಿ ನೀಡಬೇಕು. ಐ.ಟಿ. ಸೆಟ್‌ಗಳಿಗೆ ಕನಿಷ್ಠ 10ಗಂಟೆ 3ಫೇಸ್ ನಿರಂತರ ವಿದ್ಯುತ್ ನೀಡಬೇಕು. ಗ್ರಾಮಗಳಲ್ಲಿ ವಿಧಿಸಿರುವ ಮಾಸಿಕ ನಿಗದಿತ ಶುಲ್ಕ ಕೈಬಿಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಪ್ರಮುಖರಾದ ಕೆ. ರಾಘವೇಂದ್ರ, ಎಸ್. ಶಿವಮೂರ್ತಿ, ರಾಮಚಂದ್ರ, ಹಿಟ್ಟೂರು ರಾಜು, ಸಿ. ಚಂದ್ರಪ್ಪ, ರಾಜಪ್ಪ, ಎ. ಯೋಗೇಶ್, ಜ್ಞಾನೇಶ್, ಈರಣ್ಣ ಇದ್ದರು.

ಜಾಹಿರಾತು

LEAVE A REPLY

Please enter your comment!
Please enter your name here