23.2 C
Shimoga
Sunday, November 27, 2022

ಅಥ್ಲೆಟಿಕ್ಸ್’ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹೊಸನಗರ ಮಲೆನಾಡು ಪ್ರೌಢಶಾಲೆ ವಿದ್ಯಾರ್ಥಿಗಳು

ಹೊಸನಗರ : ಪಟ್ಟಣದ ಮಲೆನಾಡು ಪ್ರೌಢಶಾಲೆ ವಿದ್ಯಾರ್ಥಿಗಳಾದ ಭೂಮಿಕಾ, ಸಾಧ್ವಿನಿ ಹೆಚ್ ಎಸ್, ಬಿ ಎಚ್ ಸಿಂಚನಾ, ರಂಜಿತಾ, ರಿಲೇ ಸ್ಪರ್ಧೆಯಲ್ಲಿ, 1500 ಮೀಟರ್ ಓಟದಲ್ಲಿ ದೀಕ್ಷಿತಾ, ಹೈಜಂಪ್ ಸ್ಪರ್ಧೆಯಲ್ಲಿ ಭೂಮಿಕಾ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಕ್ರೀಡಾಪಟುಗಳಿಗೆ ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದವರು ಶಾಲಾ ಅಭಿವೃದ್ಧಿ ಸಮಿತಿಯವರು ಹಾಗೂ ಶಾಲಾ ಆಡಳಿತ ಹಾಗೂ ಬೋಧನಾ ಮಂಡಳಿಯವರು ಅಭಿನಂದಿಸಿದ್ದಾರೆ.

ವಿಭಾಗ ಮಟ್ಟಕ್ಕೆ ಆಯ್ಕೆ :

ಪಟ್ಟಣದ ಮಲೆನಾಡು ಪ್ರೌಢಶಾಲೆ ವಿದ್ಯಾರ್ಥಿಗಳಾದ ಸಿಂಚನಾ, ಬಿ.ಹೆಚ್, ಜಿ.ಆರ್ ಭೂಮಿಕಾ, ಎಂ ಮಾನಸ, ಹೆಚ್.ಸಿ ಸಾನಿಕ ಹಾಗೂ ರಂಜಿತಾ ರವರು ಈ ಬಾರಿ ಕ್ರೀಡಾಕೂಟದಲ್ಲಿ ಕಬಡ್ಡಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿ ಇದೀಗ ಬೆಂಗಳೂರಿನಲ್ಲಿ ನಡೆಯಲಿರುವ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ‌.

ಈ ಕ್ರೀಡಾಪಟುಗಳಿಗೆ ಪುನೀತ್ ರಾಜ್‍ಕುಮಾರ್ ಕನ್ನಡ ಸಂಘದವರು ಶಾಲಾ ಅಭಿವೃದ್ಧಿ ಸಮಿತಿಯವರು ಹಾಗೂ ಶಾಲಾ ಆಡಳಿತ ಬೋಧನಾ ಮಂಡಳಿಯವರು ಅಭಿನಂದಿಸಿದ್ದಾರೆ

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!