ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ಆರ್.ಎಂ.ಮಂಜುನಾಥಗೌಡ ಕಾಂಗ್ರೆಸ್ ಸೇರ್ಪಡೆಯಿಂದ ಜೆಡಿಎಸ್ ಪಕ್ಷಕ್ಕೆ ಧಕ್ಕೆ ಇಲ್ಲ

0
825

ರಿಪ್ಪನ್‌ಪೇಟೆ: ಆರ್.ಎಂ.ಮಂಜುನಾಥಗೌಡ ಮತ್ತು ಸಂಗಡಿಗರು ಜಾತ್ಯಾತೀತ ಜನತಾದಳ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ಜೆಡಿಎಸ್ ಪಕ್ಷದ ಅಸ್ಥಿತ್ವಕ್ಕೆ ಯಾವುದೆ ಧಕ್ಕೆ ಇಲ್ಲ ಎಂದು ಜಿಲ್ಲಾ ಮುಖಂಡರಾದ ಆರ್.ಎನ್.ಮಂಜುನಾಥ, ರಾಜ್ಯ ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್ ಮತ್ತು ಜೆಡಿಎಸ್ ರೈತ ಮುಖಂಡ ಮುಡುಬ ಧರ್ಮಪ್ಪ ತಿಳಿಸಿದ್ದಾರೆ.

ಜಿಲ್ಲಾ ಜನತಾದಳ ಅಧ್ಯಕ್ಷರಾಗಿ ಮಂಜುನಾಥಗೌಡ ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಜೆಡಿಎಸ್ ಸದಸ್ಯರು ಸ್ಪರ್ಧಿಸಲು ಸಹಕಾರ ನೀಡದೆ ಕೇವಲ ತೀರ್ಥಹಳ್ಳಿ ತಾಲ್ಲೂಕಿಗೆ ಮಾತ್ರ ಸೀಮಿತವಾಗಿದ್ದರು ಎಂದು ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಮೂಲ ಜನತಾದಳ (ಜಾ) ಪಕ್ಷದ ಮುಖಂಡರು ಅಭಿಮಾನಿಗಳ ಕಾರ್ಯಕರ್ತರು ವಿಚಲಿತರಾಗದೆ ಪಕ್ಷದಲ್ಲಿಯೇ ಸಕ್ರಿಯವಾಗಿರುವುದು ಸನ್ಮಾನ್ಯ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮತ್ತು ‌ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಭಿಮಾನಕ್ಕೆ ಎಂಬುದು ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಅಧಿಕಾರದ ಆಸೆಗಾಗಿ ಪಕ್ಷಾಂತರ ಮಾಡುವುದೆ ಒಂದು ಗುರಿಯನ್ನಾಗಿಸಿಕೊಂಡು ಈಗ ಪುನಃ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ಕಾರ್ಯಕರ್ತರಿಗೆ ಆರ್.ಎಂ.ಮಂಜುನಾಥಗೌಡರು ಪಕ್ಷಕ್ಕೆ ಆಗಮಿಸಿದ್ದು ನಿರ್ಗಮಿಸಿದ್ದು ತಿಳಿದಿರುವುದಿಲ್ಲ. ವಲಸಿಗರಾಗಿ ಪಕ್ಷಕ್ಕೆ ಬರುವವರಿಗೆ ಪಕ್ಷದ ಸಾರಥ್ಯವನ್ನು ನೀಡಿದ್ದು ಪಕ್ಷದ ಮುಖಂಡರು ಮಾಡಿರುವ ದೊಡ್ಡ ತಪ್ಪಾಗಿರುತ್ತದೆ. ಮುಂದಾದರೂ ವಲಸೆ ಬರುವ ಮುಖಂಡರಿಗೆ ಯಾವುದೇ ನಾಯಕತ್ವ ನೀಡಬಾರದಾಗಿ ರಾಜ್ಯ ನಾಯಕರಲ್ಲಿ ಮನವಿ ಮಾಡುತ್ತಾ, ಶಿವಮೊಗ್ಗ ಜಿಲ್ಲೆಯಲ್ಲಿ ಮಾಜಿ ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಮತ್ತು ಜನತಾದಳ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಕ್ಷದ ವೀಕ್ಷಕರಾಗಿ ನೇಮಕವಾಗಿರುವ ರಾಮಕೃಷ್ಣ ಹಾಗೂ ಭದ್ರಾವತಿ ಅಪ್ಪಾಜಿಗೌಡರು ಇಹಲೋಕ ತ್ಯಜಿಸಿದ್ದು ಅವರ ಧರ್ಮಪತ್ನಿ ಸಕ್ರಿಯವಾಗಿ ಪಕ್ಷದ ಮುಖಂಡತ್ವ ವಹಿಸಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟಿಸುವುದರೊಂದಿಗೆ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲಿಷ್ಟಗೊಳಿಸಲು ಸಹಕಾರಿಯಾಗುವುದೆಂದು ಹೇಳಿದರು.

ಮುಂಬರುವ ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ಜಿಲ್ಲೆಯ ಎಲ್ಲಾ ಕ್ಷೇತ್ರಕ್ಕೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಈ ದಿಸೆಯಲ್ಲಿ ವಲಸಿಗ ನಾಯಕರ ಮೇಲೆ ಆಕ್ರೋಶಗೊಂಡು ತಟಸ್ಥರಾಗಿರುವ ಎಲ್ಲಾ ಜೆಡಿಎಸ್ ಮುಖಂಡರುಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಕೂಡಲೆ ಸಕ್ರಿಯವಾಗಿ ಕುಮಾರಸ್ವಾಮಿಯವರ ಕೈ ಬಲಪಡಿಸಲು ಕಾರ್ಯಪ್ರವೃತ್ತರಾಗಲು ಮನವಿ ಮಾಡಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ರಾಜ್ಯಮುಖಂಡ ಆರ್.ಎ.ಚಾಬುಸಾಬ್, ಜೆಡಿಎಸ್ ರೈತಮುಖಂಡ ಮುಡುಬ ಧರ್ಮಪ್ಪ, ಕಲ್ಲೂರು ಈರಪ್ಪ ಇನ್ನಿತರ ಪಕ್ಷದ ಮುಖಂಡರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here