ಅಧಿಕಾರಿಗಳಿಂದ ಗ್ರಾಮಭೇಟಿ ಕಾರ್ಯಕ್ರಮ

0
92

ಕಡೂರು: ತಾಲ್ಲೂಕಿನ ಕೆರೆಸಂತೆ ಗ್ರಾಮದಲ್ಲಿ ಶನಿವಾರ ಅಧಿಕಾರಿಗಳ ಗ್ರಾಮ ಭೇಟಿ ಕಾರ್ಯಕ್ರಮ ತಹಶೀಲ್ದಾರ್ ಜೆ. ಉಮೇಶ್ ಉಪಸ್ಥಿತಿಯಲ್ಲಿ ನಡೆಯಿತು.

ಅಂಚೆಚೋಮನಹಳ್ಳಿ, ಲಿಂಗ್ಲಾಪುರ ಮುಂತಾದ ಗ್ರಾಮಗಳಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನಿವೇಶನ ಮತ್ತು ಮನೆ ರಹಿತರಿಗೆ ಸೌಲಭ್ಯ ಒದಗಿಸಿಕೊಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಹಲವಾರು ಪ್ರಕರಣಗಳಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಹಕ್ಕುಪತ್ರ ಸಿಗದಿರುವ ಬಗ್ಗೆಯೂ ಪ್ರಸ್ತಾಪವಾಯಿತು. ಇದರ ಕುರಿತು 94-ಸಿ ಅಡಿ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲನೆ ನಡೆಸಿ ಕ್ರಮ ಕೈ ಗೊಳ್ಳುವುದಾಗಿ ತಹಶೀಲ್ದಾರ್ ಜೆ. ಉಮೇಶ್ ತಿಳಿಸಿದರು.

ಸರ್ಕಾರಿ ಗೋಮಾಳದಲ್ಲಿ ಶಾಲೆಗೆ ಆಟದ ಮೈದಾನ ನಿರ್ಮಿಸಿಕೊಡಲು ಅಂಚೇಚೋಮನಹಳ್ಳಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಕುರಿತು ಸಂಬಂಧಿಸಿದ ಇಲಖೆಯವರು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.

ಸರ್ಕಾರ ರೈತರ ಮನೆ ಬಾಗಿಲಿಗೇ ಕಂದಾಯ ದಾಖಲೆಗಳನ್ನು ನೀಡುವ ಯೋಜನೆ ಜಾರಿಯಲ್ಲಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಸಮಸ್ಯೆಯಿದ್ದರೂ ನೇರವಾಗಿ ಅಧಿಕಾರಿಗಳ ಗಮನಕ್ಕೆ ತನ್ನಿ. ತೊಂದರೆಯಾದಲ್ಲಿ ನೇರವಾಗಿ ನಮ್ಮನ್ನೆ ಸಂಪರ್ಕಿಸಬಹುದು ಎಂದು ಜೆ. ಉಮೇಶ್ ತಿಳಿಸಿದರು.

ಸುಮಾರು 25 ಕ್ಕೂ ಹೆಚ್ಚು ಫಲಾನುಭವಿಗಳಿಗೆ ವಿಧವಾ ವೇತನ ಮತ್ತಿತರ ಸವಲತ್ತುಗಳ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಕಂದಾಯಾಧಿಕಾರಿಗಳಾದ ಹೇಮಾವತಿ, ಕಲ್ಮರುಡಪ್ಪ, ಗ್ರೇಡ್-2 ತಹಶೀಲ್ದಾರ್ ಧನಂಜಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾಬಾಯಿ, ಸಿಡಿಪಿಓ ಆಶಾ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here