ಅನಸ್ತೇಶಿಯಾ ವೈದ್ಯರ ನೇಮಕಕ್ಕೆ ಜಯಕರ್ನಾಟಕ‌ ಸಂಘಟನೆ ಆಗ್ರಹ

0
51

ತರೀಕೆರೆ: ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಅನಸ್ತೇಶಿಯ ಇಂಜೆಕ್ಷನ್ ಕೊಡುವ ವೈದ್ಯರನ್ನು ನೇಮಕಾತಿ ಮತ್ತು ಗರ್ಭಿಣಿಯರಿಗೆ ಬಳಸುವ ಸ್ಕ್ಯಾನಿಂಗ್ ಮಶೀನ್ ಆಪರೇಟರ್ ಅನ್ನು ಕೂಡಲೇ ನೇಮಕಾತಿ ಮಾಡಬೇಕೆಂದು ಒತ್ತಾಯಿಸಿ ಜಯಕರ್ನಾಟಕ‌ ಸಂಘಟನೆ ವತಿಯಿಂದ ತಾಲ್ಲೂಕು ಆಸ್ಪತ್ರೆಆಡಳಿತ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ್, ಕೆಲವು ತಿಂಗಳಿಂದ ಗರ್ಭಿಣಿಯರ ಹೆರಿಗೆ ಸಮಯದಲ್ಲಿ ಅನಸ್ಥೇಶಿಯ ಕೊಡುವ ವೈದ್ಯರು ಇರುವುದಿಲ್ಲ. ಇದರಿಂದ ತರೀಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ಹಾಗೂ ಇತರೆ ತಾಲ್ಲೂಕುಗಳಿಂದ ಹೆರಿಗೆಗೆ ಬರುವ ಬಡ ಕುಟುಂಬದ ಗರ್ಭಿಣಿಯರು, ಹೆರಿಗೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಹೆರಿಗೆ ಆಗುತ್ತಿರುವುದು ತುಂಬಾ ಅವಮಾನಕರ ಸಂಗತಿ ಆಗಿರುತ್ತದೆ ಎಂದು ತಿಳಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here