ಹೊಸನಗರ : ಪಟ್ಟಣದ ಮಾರಿಗುಡ್ಡದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ತಾಲೂಕಿನ ಅರೋಡಿ ಕೊಡಸೆಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಂಜುಳಾ ರವರ ಮುದ್ದು ಮುಖದ ಏಕೈಕ ಪುತ್ರಿ ಶಮಾ ಎಲ್ ಬಂಡಿ (15) ತನ್ನ ತಾಯಿಯನ್ನು ಮಾರ್ನಿಂಗ್ ಕ್ಲಾಸ್ ಡ್ಯೂಟಿಗೆ ಕಳುಹಿಸಿ ಮನೆಗೆ ಬಂದು ನೇಣಿಗೆ ಶರಣಾದ ದುರಂತ ಘಟನೆ ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಶಮಾ ಪಟ್ಟಣದ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ಎಸೆಸೆಲ್ಸಿ ಓದುತ್ತಿರುವ ವಿದ್ಯಾರ್ಥಿನಿಯಾಗಿದ್ದು ಕಳೆದ ಕೆಲ ಸಮಯದಿಂದ ಈಕೆ ಅನಾರೋಗ್ಯ ಪೀಡಿತಳಾಗಿದ್ದಳು ಎಂದು ತಿಳಿದುಬಂದಿದೆ.

ಮೃತ ವಿದ್ಯಾರ್ಥಿನಿಯ ತಂದೆ ನಿವೃತ್ತ ಸೈನಿಕರಾಗಿದ್ದು ಪ್ರಸ್ತುತ ಅಮೃತ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದಾರೆ.
