ಅನುಕೂಲಕ್ಕೆ ಅನುಗುಣವಾಗಿ ನಗರದ ರಸ್ತೆಗಳ ಅಭಿವೃದ್ಧಿ: ಸಿ.ಟಿ.ರವಿ

0
279

ಚಿಕ್ಕಮಗಳೂರು: ನಗರದಲ್ಲಿ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ವಿವಿಧ ಯೋಜನೆಗಳಲ್ಲಿ ಸುಮರು 21ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನ ಅಡಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಕೆಲವು ಕಡೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಎಂದು ಶಾಸಕ ಸಿ.ಟಿ. ರವಿ ತಿಳಿಸಿದರು.

ಇನ್ನು ಬಾಕಿ ಉಳಿದಿರುವ ರಸ್ತೆಗಳನ್ನು ಅನುಕೂಲದ ಆದ್ಯತೆಯ ಅನುಗುಣವಾಗಿ ಕಾಮಗಾರಿ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಗರದಲ್ಲಿನ ರಸ್ತೆಗಳು ಡಾಂಬರೀಕರಣ ಹಾಗೂ ಕೆಲವು ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯಾಗಿ ನಿರ್ಮಿಸಲು 2029-20ನೇ ಸಾಲಿನಲ್ಲಿ 11 ಕೋಟಿ ರೂಪಾಯಿ ಅನ್ನು. ವಿಶೇಷ ಅನುದಾನ ರಾಜ್ಯ ಹಣಕಾಸು ನಿಧಿಯಿಂದ ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಒಟ್ಟು 81 ರಸ್ತೆಗಳ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಶೇ. 80ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ನಗರಸಭೆಗೆ ಕಳೆದ ಸಾಲಿನಲ್ಲಿ ರಾಜ್ಯ ಹಣಕಾಸು ನಿಧಿಯಿಂದ ವಿಶೇಷ ಅನುದಾನವಾಗಿ 10 ಕೋಟಿ ರೂ. ಬಿಡುಗಡೆಯಾಗಿದೆ. ಇದ್ದರಲ್ಲಿ ಒಟ್ಟು 74 ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಅನುದಾನದಿಂದ ನಿರ್ಮಾಣಗೊಳ್ಳುವ ರಸ್ತೆಗಳ ಡಾಂಬರೀಕರಣಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಸದ್ಯದಲ್ಲೆ ಪೂರ್ಣಗೊಳ್ಳಲಿದೆ ಎಂದರು.

ಸರ್ಕಾರ ನೀಡಿರುವ ವಿಶೇಷ ಅನುದಾನದ ಜೊತೆಗೆ ನಗರೋತ್ಥಾನ ಹಂತ 3ರಲ್ಲಿ 6 ಕೋಟಿ ರೂ. ಹಣ ಉಳಿದಿದ್ದು, ಅದನ್ನು ಬಳಸಿಕೊಂಡು 44 ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ದೀಪಾ ನರ್ಸಿಂಗ್ ಹೋಂ ರಸ್ತೆ ಕೆಳಭಾಗದ ಕಾಲುವೆಯಿಂದ ನಿಂದ ಬೈಪಾಸ್ ರಸ್ತೆಯವರೆಗೆ 20ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ನಡೆಯಲಿದ್ದು, ಕುರುವಂಗಿ ಮುಖ್ಯರಸ್ತೆ, ಗೌರಿಕಾಲುವೆ ಚಾನೆಲ್ ಪಕ್ಕದ ರಸ್ತೆ, ಬಾಳೆಹಳ್ಳಿ ಮುಖ್ಯ ರಸ್ತೆ, ಗೃಹಮಂಡಳಿ 2ನೇ ಹಂತದಲ್ಲಿ ಪಾರ್ಕ್ ಅಕ್ಕಪಕ್ಕದಲ್ಲಿ ಇರುವ ರಸ್ತೆಗಳು ಬ್ರಾಹ್ಮಣ ವಸತಿ ನಿಲಯದ ಹಿಂಭಾಗ ಪಾರ್ಕ್ ಕೆಳಭಾಗದ ಅಡ್ಡ ರಸ್ತೆಗಳು, ಚನ್ನಾಪುರ ಬಡಾವಣೆಯಲ್ಲಿ ರೈಲ್ವೆ ಸೇತುವೆಯವರೆಗೆ, ಹೊಸಮನೆ ಸರ್ಕಲ್‌ನಿಂದ ಜಯನಗರದ ಶಿಬು ಅಂಗಡಿಯವರೆಗಿನ ರಸ್ತೆ, ಗಂಧರ್ವ ನರ್ಸರಿ ಮುಂಭಾಗದ ಮತ್ತು ಮಾರುತಿ ನಗರದ ಅಡ್ಡ ರಸ್ತೆಗಳು, ಪಂಪಾನಗರದ ಕೆಲವು ಅಡ್ಡರಸ್ತೆ ಸೇರಿದಂತೆ ಬಹುತೇಕ ರಸ್ತೆಗಳು ಡಾಂಬರೀಕರಣಕ್ಕೆ ಅಗಲಿವೆ ಎಂದು ಹೇಳಿದರು.

ಈ ಎಲ್ಲಾ ಯೋಜನೆಗಳಲ್ಲಿ ನಗರದ ರಸ್ತೆ ಡಾಂಬರೀಕರಣ ಮತ್ತು ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ನಗರಸಭೆಯಿಂದ ಕೈಗೊಳ್ಳಲಾಗಿದ್ದು, ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು ಇನ್ನುಳಿದಂತೆ ಕಾಮಗಾರಿಗಳನ್ನು ನಿರಂತರ ಮಳೆಯಿಂದಾಗಿ ಹಾಗೂ ನಗರದಲ್ಲಿ ಒಳಚರಂಡಿ ಮತ್ತು ದಿನಪೂರ್ತಿ ನೀರು ನೀಡುವ ಅಮೃತ್ ಯೋಜನೆಗಳ ಅನುಷ್ಠಾನದಿಂದ ರಸ್ತೆ ದುರಸ್ಥಿ ಹಾಗೂ ಅಭಿವೃದ್ಧಿಗೆ ಅಡ್ಡಿಯಾಗಿದ್ದು, ಮಳೆ ಬಿಡುವು ನೀಡಿದ ತಕ್ಷಣ ಮಂಜೂರಾಗಿರುವ ಎಲ್ಲಾ ರಸ್ತೆ ಕಾಮಗಾರಿಗಳನ್ನು ಮುಗಿಸಲು ಸಂಬಂಧಿಸಿದ ಇಲಾಖೆಗೆ ಈಗಾಗಲೇ ಸೂಚಿಸಲಾಗಿದೆ.

ನಗರದ ರಸ್ತೆ ದುರಸ್ಥಿ ಮತ್ತು ಅಭಿವೃದ್ಧಿಗೆ ಬಂದಿರುವ 21ಕೋಟಿ ರೂ. ಹಾಗೂ‌ ಉಳಿದಿರುವ 6 ಕೋಟಿ ರೂ. ಗಳನ್ನು ಬಳಸಿಕೊಂಡು ನಗರದ ರಸ್ತೆಗಳ ಡಾಂಬರೀಕರಣ ಮುಕ್ತಾಯಗೊಂಡರೆ ನಗರದ ಬಹುತೇಕ ರಸ್ತೆಗಳು ಉತ್ತಮ ಡಾಂಬರ್ ರಸ್ತೆಗಳಾಗಲಿದ್ದು, ಬಾಕಿ ಉಳಿದ ರಸ್ತೆಗಳನ್ನು ಅವಶ್ಯಕತೆ ಮೇರೆಗೆ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here