23.2 C
Shimoga
Sunday, November 27, 2022

ಅನುದಾನಿತ ನೌಕರರ ಬೇಡಿಕೆ ಈಡೇರಿಕೆಗೆ ಬೆಂಬಲಿಸುವಂತೆ ಒತ್ತಾಯಿಸಿ ಶಾಸಕ ಹರತಾಳು ಹಾಲಪ್ಪನವರಿಗೆ ನೌಕರರ ಮನವಿ

ಹೊಸನಗರ : ಅಕ್ಟೋಬರ್ 7 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನುದಾನಿತ ನೌಕರರ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ನವೆಂಬರ್ ನಾಲ್ಕರ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ನೌಕರರು ಪಾಲ್ಗೊಳ್ಳಲಿದ್ದ ಕಾರಣ ತಾವುಗಳು ಈ ಪ್ರತಿಭಟನೆ ಹೋರಾಟಕ್ಕೆ ಬೆಂಬಲಿಸಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಹೆಗಲುಕೊಡಬೇಕೆಂದು ಹೊಸನಗರ ತಾಲೂಕಿನ ಅನುದಾನಿತ ನೌಕರರ ಪರವಾಗಿ ಶಿಕ್ಷಕ ವೃಂದದವರು ಶಾಸಕರಾದ ಹರತಾಳು ಹಾಲಪ್ಪನವರಿಗೆ ಇಂದು ಮನವಿ ಸಲ್ಲಿಸಿದರು.

ಅನುದಾನ ರಹಿತ ಅವಧಿಯನ್ನು ಕಾಲ್ಪನಿಕವಾಗಿ ಪರಿಗಣಿಸಿ ಈಗಾಗಲೇ ಬರಿಗೈಲಿ ನಿವೃತ್ತಿಯಾಗಿರುವ ನೌಕರರಿಗೆ ನಿಶ್ಚಿತ ಠೇವಣಿ ನೀಡಬೇಕು. ಪಿಂಚಣಿ ಮತ್ತಿತರ ಸೌಲಭ್ಯಗಳಿಲ್ಲದಿರುವ ಕಾರಣ ನಮ್ಮ ನಿವೃತ್ತಿ ನಂತರದ ಭವಿಷ್ಯದ ಭದ್ರತೆ ಅಯೋಮಯವಾಗಿದೆ. ಹಾಗಾಗಿ ನಮ್ಮ ನ್ಯಾಯಯುತ ಹೋರಾಟಕ್ಕೆ ತಾವು ಬೆಂಬಲಿಸಿ ನಮಗೆ ನೈತಿಕ ಬೆಂಬಲ ನೀಡಬೇಕೆಂದು ಒತ್ತಾಯಿಸುವ ಮನವಿಯನ್ನು ಶಾಸಕ ಹರತಾಳು ಹಾಲಪ್ಪನವರಿಗೆ ಹೊಸನಗರ ತಾಲೂಕು ಶಿಕ್ಷಕ ವೃಂದದವರು ನೀಡಿದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!