ಅನುಭವ ತುಂಬಿರುವ ಹಿರಿಯರು ಸಮಾಜದ ಆಸ್ತಿ ; ಬಿವೈಆರ್

0
133

ಶಿಕಾರಿಪುರ: ಅನುಭವ ತುಂಬಿರುವ ಹಿರಿಯರು ಸಮಾಜದ ಆಸ್ತಿ ಅವರ ಅನುಭವ ನಾವೆಲ್ಲರೂ ಬಳಸಿಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ನಿವೃತ್ತ ನೌಕರರ ಸಂಘದ 33ನೇ ವರ್ಷದ ಸರ್ವ ಸದಸ್ಯರ ಸಭೆ, 70ವರ್ಷ ತುಂಬಿದ ಹಿರಿಯ ನಿವೃತ್ತರಿಗೆ ಸನ್ಮಾನ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆಧುನಿಕ ಸಮಾಜದಲ್ಲಿ ನಿವೃತ್ತಿ ನಂತರ ಏನೂ ಇಲ್ಲ ಎನ್ನುವ ಮನೋಭಾವ ಹೆಚ್ಚಾಗಿದೆ ಅದು ಸರಿಯಲ್ಲ ಪ್ರತಿಯೊಬ್ಬರೂ ತಮಗೆ ಇಷ್ಟವಾದ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡು ಮನಸ್ಸಿಗೆ ನೆಮ್ಮದಿ ಪಡೆದುಕೊಳ್ಳಬೇಕು. ವೃತ್ತಿಗೆ ಮಾತ್ರ ನಿವೃತ್ತಿ ಇದ್ದು ನಂತರದಲ್ಲಿ ಪ್ರತಿಯೊಬ್ಬರೂ ತಮಗೆ ಇಷ್ಟವಾದ ಕ್ಷೇತ್ರದಲ್ಲಿ, ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಹಲವು ಬಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ತಾಲೂಕು ನಿವೃತ್ತ ನೌಕರರ ಸಂಘ ಅಧ್ಯಕ್ಷ ಜಿ.ಗಿರಿಯಪ್ಪ ಮಾತನಾಡಿ, ನಿವೃತ್ತ ನೌಕರರು ಅನುಭವ ಹೊಂದಿದ್ದು ಅವರ ಅನುಭವ ಬಳಸಿಕೊಳ್ಳುವ ಮನೋಭಾವ ಹೆಚ್ಚಾಗಬೇಕು. ಹಲವು ಇಲಾಖೆಯಲ್ಲಿ ನಿವೃತ್ತ ನೌಕರರ ನೇಮಕಕ್ಕೆ ಅನುಮೋದನೆ ಸಿಕ್ಕಿದೆ ಎಲ್ಲ ಇಲಾಖೆಯಲ್ಲೂ ಅಂತಹ ಪ್ರಯತ್ನ ಆಗಬೇಕು ದೈಹಿಕ, ಮಾನಸಿಕ ಸಾಮರ್ಥ್ಯ ಹೊಂದಿರುವ ನಿವೃತ್ತ ನೌಕರರಿಗೆ ಸೇವಾ ಮನೋಭಾವದಲ್ಲಿ ಅನುಭವ ಬಳಸಿಕೊಳ್ಳುವ ಕೆಲಸ ಆಗಬೇಕು ಎಂದರು.

ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಡಿ.ಭೂಕಾಂತ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಧುಕೇಶ್ವರ, ನಿವೃತ್ತ ನೌಕರರ ಸಂಘದ ರಾಮಕೃಷ್ಣ, ಸಿ.ಬಸವನಗೌಡ, ಮಲ್ಲಪ್ಪ, ದುರುಗಪ್ಪ, ಬಿ.ಎಂ.ನಾಗರಾಜ್, ನಿರ್ಮಲಾ ಪೈ, ಜೆಟ್ಟಪ್ಪ, ಶಿವರುದ್ರಪ್ಪ, ಮಲ್ಲಿಕಾರ್ಜುನ ಪಾಟೀಲ್, ಕಮಲಾಕರ, ಶಿವಪ್ಪ, ಬಸವರಾಜಪ್ಪ, ನಾಗರಾಜಪ್ಪ ಇತರರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here