ಅನೈತಿಕ ಸಂಬಂಧ: ಕತ್ತು ಸೀಳಿ ಮಹಿಳೆಯ ಕೊಲೆ

0
1323

ಶಿಕಾರಿಪುರ: ತಾಲೂಕಿನ ಅಮಟೆಕೊಪ್ಪದ ಸ್ಮಶಾನದ ಸಮೀಪ ಮಹಿಳೆಯೋರ್ವಳ್ಳನ್ನು ಕತ್ತುಸೀಳಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ತಾಲೂಕಿನ ಕಪ್ಪನಹಳ್ಳಿ ಗ್ರಾಮದ ಹೇಮಾವತಿ (35) ಕೊಲೆಯಾದ ಮಹಿಳೆಯಾಗಿದ್ದು, ಕೊಲೆಗೆ ಅನೈತಿಕ ಸಂಬಂಧವೆ ಕಾರಣ ಎನ್ನಲಾಗಿದೆ.

ಏನಿದು ಘಟನೆ?

ಹೇಮಾವತಿ ಇವರ ಗಂಡ ಕಳೆದ ಹತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದು, ಮೂರು ವರ್ಷಗಳಿಂದ ಅದೇ ಗ್ರಾಮದ ವ್ಯಕ್ತಿಯೊಬ್ಬರ ಜೊತೆ ಸಲುಗೆಯಿಂದ ಇದ್ದು ಈ ವಿಚಾರವಾಗಿ ಪಂಚಾಯಿತಿ ಮಾಡಿ ಆ ಗ್ರಾಮದ ವ್ಯಕ್ತಿಗೆ ಹೇಮಾವತಿಯವರ ಸಹವಾಸಕ್ಕೆ ಹೋಗಬಾರದೆಂದು ತಿಳಿಸಲಾಗಿತ್ತು. ಪಂಚಾಯಿತಿ ದಿನ ಹೇಮಾವತಿಯವರಿಗೆ ಸದರಿ ವ್ಯಕ್ತಿಯು ಕೊಲೆ ಬೆದರಿಕೆಯನ್ನು ಸಹ ಹಾಕಿದ್ದು, ಇಂದು ಬೆಳಗಿನಜಾವ ಹೇಮಾವತಿ ಫ್ಯಾಕ್ಟರಿಯ ಕೆಲಸಕ್ಕೆ ಹೋಗುತ್ತಿರುವಾಗ ಶಿಕಾರಿಪುರ ಅಮಟೆಕೊಪ್ಪ ಸ್ಮಶಾನದ ಹತ್ತಿರ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here