ಅಪಪ್ರಚಾರಕ್ಕೆ ಬೇಸತ್ತ ಮಹಿಳೆ ; ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ !

0
786

ಭದ್ರಾವತಿ: ಅಪಪ್ರಚಾರ ಮಾಡಿದ ಪರಿಣಾಮ ಬೇಸತ್ತ ಮಹಿಳೆಯೋರ್ವಳು ಇಬ್ಬರು ಮಕ್ಕಳೊಂದಿಗೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಕೊಂಡ ಘಟನೆ ನಡೆದಿದೆ.

ಭದ್ರಾವತಿಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಹತೋಳಲು ಗ್ರಾಮದ ವಾಸಿಗಳಾದ ಸಂತೋಷ ಹಾಗೂ ಆತನ ಪತ್ನಿ ಆಶಾರವರು ಭದ್ರಾವತಿಯ ಯಡೇಹಳ್ಳಿ ಗ್ರಾಮದ ವಾಸಿಯಾದ ವೀಣಾ (32) ರವರ ಬಳಿ ಈ ಹಿಂದೆ 8 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು, ಸಾಲದ ಹಣವನ್ನು ವಾಪಾಸ್ಸು ಕೊಡಿಯೆಂದು ಕೇಳದಾಗ ಸಂತೋಷ ಹಾಗೂ ಆಶಾರವರು ವೀಣಾಳಿಗೆ ಹಣವನ್ನು ಹಿಂದಿರುಗಿಸದೇ ಆಕೆಯು ಬೇರೆಯವರ ಜೊತೆ ಸಂಬಂಧ ಇಟ್ಟಿಕೊಂಡಿದ್ದಾಳೆಂದು ಅಪಪ್ರಚಾರ ಮಾಡಿ ಮಾನಸಿಕವಾಗಿ ಹಿಂಸೆ ನೀಡಿತ್ತಿದ್ದು, ಈ ವಿಚಾರವಾಗಿ ಆಕೆಯು ಮನನೊಂದು ಜ.13 ರಂದು ಸಂಜೆ ಸಂಕ್ರಾಂತಿ ಹಬ್ಬಕ್ಕೆ ತನ್ನ ತವರು ಮನೆ ಹೊಳಲ್ಕೆರೆಗೆ ಹೋಗುತ್ತೇನೆಂದು ಹೇಳಿ ತನ್ನ 07 ಮತ್ತು 01 ವರ್ಷದ ಇಬ್ಬರು ಹೆಣ್ಣು ಮಕ್ಕಳ ಜೊತೆ ಮನೆಯಿಂದ ಹೊರಟು ಹಂಚಿನ ಸಿದ್ದಾಪುರ ಗ್ರಾಮದ ಬಳಿ ಇರುವ ಭದ್ರಾ ನಾಲೆಗೆ ಹಾರಿ ಮೃತಪಟ್ಟಿದ್ದು ನಂತರ ವೀಣಾಳ ಮೃತ ದೇಹವು ಹೊನ್ನಾಳಿ ತಾಲ್ಲೂಕಿನ ಯಕ್ಕನಹಳ್ಳಿಯ ಹತ್ತಿರ ಭದ್ರಾ ನಾಲೆಯಲ್ಲಿ ದೊರೆತಿದೆ ಎಂದು ಜ.14 ರಂದು ಮೃತೆಯ ಪತಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0012/2022 ಕಲಂ 306 ಸಹಿತ 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂ ಪಿ.ಐ. ಹೊಳೆಹೊನ್ನೂರು ಹಾಗೂ ಸಿಬ್ಬಂದಿಗಳ ತಂಡವು ಶನಿವಾರದಂದು ಈ ಪ್ರಕರಣದ ಆರೋಪಿಯಾದ ಭದ್ರಾವತಿಯ ಅರಹತೋಳಲು ಗ್ರಾಮದ ಸಂತೋಷ (35) ನನ್ನು ಬಂಧಿಸಿದ್ದಾರೆ.

ವೀಣಾಳ 07 ವರ್ಷದ ಮಗುವಿನ ಮೃತ ದೇಹವು ಚನ್ನಗಿರಿಯ ನಲ್ಲೂರು ಬಳಿಯ ಭದ್ರಾ ನಾಲೆಯಲ್ಲಿ ದೊರೆತಿದ್ದು, ಮತ್ತೊಬ್ಬ ಮಗಳ ಪತ್ತೆ ಕಾರ್ಯ ಮುಂದುವರೆದಿದೆ.

ಜಾಹಿರಾತು

LEAVE A REPLY

Please enter your comment!
Please enter your name here