ತೀರ್ಥಹಳ್ಳಿ: ಅಪರಿಚಿತ ವಾಹನ ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ನರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳಗೇರಿ ಬಸ್ ನಿಲ್ದಾಣ ಬಳಿ ಶನಿವಾರ ನಡೆದಿದೆ.
ಚೇತನ್ (27) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಶನಿವಾರ ಮುಂಜಾನೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಬಸ್ ನಿಲ್ದಾಣ ಸಮೀಪ ಸ್ಪೈಂಡರ್ ಬೈಕ್ ನಿಂತಿದ್ದು, ಪಾದರಕ್ಷೆ ಸಹ ಅಲ್ಲೇ ಇದೆ ಎನ್ನಲಾಗಿದೆ. ಬೈಕ್ ನಿಂತ ಸ್ಥಿತಿಯಲ್ಲೇ ಇರುವುದರಿಂದ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
Related