ಅಪ್ಪಾಜಿಯವರ ಜನಪ್ರಿಯ ಯೋಜನೆಗಳು ಬಿಜೆಪಿಯವರಿಂದ ಧೂಳಿಪಟ ; ಮಧು ಬಂಗಾರಪ್ಪ

0
589

ಹೊಸನಗರ : ಆಶ್ರಯ ಆರಾಧನ ವಿಶ್ವ ಉಚಿತ ವಿದ್ಯುತ್ ಮೊದಲಾದ ಜನೋಪಯೋಗಿ ಯೋಜನೆಗಳನ್ನು ರೂಪಿಸಿದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಕನಸಿನ ಕೂಸು ನುಚ್ಚುನೂರು ಮಾಡುತ್ತಿರುವ ಬಿಜೆಪಿ ಆಡಳಿತ ವೈಖರಿ ಬಗ್ಗೆ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪನವರು ಆತಂಕ ವ್ಯಕ್ತಪಡಿಸಿದರು.

ಅವರು ಇಂದು ಪಟ್ಟಣದ ಕಾಂಗ್ರೆಸ್ ಕಚೇರಿ (ಗಾಂಧಿ ಮಂದಿರ)ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಪ್ಪಾಜಿ ಅವರ ಜನಪ್ರಿಯ ಯೋಜನೆ ಬಗ್ಗೆ ಇಡಿ ವಿಶ್ವವೇ ಕೊಂಡಾಡಿ ಬಂಗಾರಪ್ಪ ಅವರು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಇಡೀ ವಿಶ್ವದ ಗಮನ ಸೆಳೆದಿದ್ದರು.

ಇಡಿ ರಾಜ್ಯಕ್ಕೆ ವಿದ್ಯುತ್ ನೀಡುವ ಹೊಸನಗರ ತಾಲೂಕು ಇದೀಗ ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದೆ. ಅಪ್ಪಾಜಿಯವರ ಉಚಿತ ವಿದ್ಯುತ್ ಯೋಜನೆ ಕನಸಿನ ಕೂಸಾಗಿ ರಾಜ್ಯದ ವಿದ್ಯುತ್ ಬಂಡವಾಳ ಶಾಹಿಗಳ ಪಾಲಾಗಿದೆ. ಇದರಿಂದ ಜಿಲ್ಲೆಯ ರೈತರು ಬೆಳೆ ನಾಶದಿಂದ ಸಂಕಷ್ಟಕ್ಕೀಡಾಗಿದ್ದಾರೆ.‌ ರಾಜ್ಯದ ಕಡುಬಡವರಿಗೆ ನಿರೂಪಿಸುವ ಯೋಜನೆಗಳು ಬಿಜೆಪಿ ಆಡಳಿತದಲ್ಲಿ ಇದೀಗ ಬಂಡವಾಳ ಶಾಹಿಗಳ ಪಾಲಾಗಿದೆ. ಎಲ್ಲ ಯೋಜನೆ ಕ್ಷೇತ್ರಗಳಲ್ಲಿ ಬಂಡವಾಳ ಶಾಹಿಗಳಿಂದ ಪಾಲು ಪಡೆಯುವುದು ಆಡಳಿತ ಪಕ್ಷದವರ ಸಾಧನೆಯಾಗಿದೆ.

ನಿವೇಶನ ಹಕ್ಕುಪತ್ರ ದರಕಾಸ್ತು ಮಂಜೂರು ಇಲ್ಲ ಪಾರಂಪರಿಕ ಅರಣ್ಯ ಹಕ್ಕುಕಾಯ್ದೆ ಬಗರುಕುಂ ಸಾಗುವಳಿ ಸಕ್ರಮ ಕಾರ್ಯಕ್ರಮ ಆಶ್ರಯ ಸಮಿತಿ ಯೋಜನೆ ಅಕ್ರಮ ಸಕ್ರಮ ನಿವೇಶನ ಹಕ್ಕು ಪತ್ರಗಳಿಲ್ಲದೆ ಇದೀಗ ಜನ ಆತಂಕಕ್ಕೆ ಒಳಗಾಗಿದ್ದಾರೆ. ಈಗಿನ ಬಿಜೆಪಿ ಸರ್ಕಾರ ವ್ಯವಹಾರಿಕ ಸರ್ಕಾರವಾಗಿ ರೂಪುಗೊಂಡಿದೆ ಸರ್ಕಾರದ ಯೋಜನೆಗಳು ಶ್ರೀಮಂತರು ಬಂಡವಾಳ ಶಾಹಿಗಳು ಗುತ್ತಿಗೆದಾರರ ಪಾಲಾಗಿದೆ.

ಈ ಎಲ್ಲಾ ಅಕ್ರಮಗಳ ವಿರುದ್ಧ ಧ್ವನಿಯೆತ್ತಲು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಜ್ಜಾಗಿದ್ದು ಹೊಸ ವರ್ಷ ಯುಗಾದಿಯ ಹೊಸ್ತಿಲಲ್ಲಿ ತಾಲೂಕು ಕೇಂದ್ರದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸುವ ಮೂಲಕ ಆದರೆ ಆಡಳಿತದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಡಿಜಿಟಲ್ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಪರಿಶೀಲಿಸಿದ ಪಕ್ಷದ ಮುಖಂಡರು ಸದಸ್ಯತ್ವ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಈ ಸಂದರ್ಭದಲ್ಲಿ ಕರೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಜಿಲ್ಲಾ ಮುಖಂಡರಾದ ಆರ್.ಎಂ ಮಂಜುನಾಥ ಗೌಡ, ಕಲಗೋಡು ರತ್ನಾಕರ್, ಬಡ್ಡಿ ರಾಮಚಂದ್ರ, ಎರಗಿ ಉಮೇಶ್, ಬಿ.ಆರ್ ಪ್ರಭಾಕರ್, ಬಿ.ಜಿ. ಚಂದ್ರಮೌಳಿ, ಡಿ.ಆರ್ ಅಶೋಕ್, ಎಂ.ಪಿ ಸುರೇಶ್, ಅಮೀರ್ ಹಮ್ಜ, ಮಹಿಳಾ ಮುಖಂಡರಾದ ನೇತ್ರಾ ಮಂಜುಳಾ (ಗೀತಾ), ಸಾಕಮ್ಮ, ಎನ್.ವಿ ಲಲಿತಾ ಮೊದಲಾದವರು ಪಾಲ್ಗೊಂಡಿದ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಿ.ಎಂ ಸದಾಶಿವ ಶ್ರೇಷ್ಟಿ ಸ್ವಾಗತಿಸಿದರು. ಜಯನಗರ ಗುರು ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here