ಅಬಕಾರಿ ಅಧಿಕಾರಿಗಳ ದಾಳಿ ; ಗಾಂಜಾ ಗಿಡಗಳು ವಶಕ್ಕೆ, ಇಬ್ಬರ ಬಂಧನ !

0
674

ಸೊರಬ : ತಾಲೂಕಿನ ಕುಳವಳ್ಳಿ ಗ್ರಾಮದ ಮನೆಯೊಂದರ ಹಿಂಭಾಗದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಕುಳವಳ್ಳಿ ಗ್ರಾಮದ ಗಾಯತ್ರಮ್ಮ ಅವರ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆಯ ಜಿಲ್ಲಾ ಉಪ ಆಯುಕ್ತ ಕ್ಯಾಪ್ಟನ್ ಜಿ.ಎ. ಅಜಿತ್ ಕುಮಾರ್ ಮಾರ್ಗದರ್ಶನದಲ್ಲಿ ಸಾಗರ ಅಬಕಾರಿ ಉಪ ಅಧೀಕ್ಷಕ ಸಿ. ಶಿವಪ್ರಸಾದ್ ಮತ್ತು ಸೊರಬ ವಲಯ ಅಬಕಾರಿ ನಿರೀಕ್ಷಕ ಆರ್. ಶ್ರೀನಾಥ್ ನೇತೃತ್ವದ ತಂಡ ದಾಳಿ ನಡೆಸಿ 26 ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯತ್ರಮ್ಮ ಹಾಗೂ ಸುವರ್ಣಮ್ಮ ಎಂಬುವವರನ್ನು ವಶಕ್ಕೆ ಪಡೆಯಲಾಗಿದ್ದು, ಮತ್ತೋರ್ವ ಆರೋಪಿ ಕುಮಾರ ಗೌಡ ತಲೆಮರೆಸಿಕೊಂಡಿದ್ದಾನೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ಅಬಕಾರಿ ಇಲಾಖೆಯ ರಾಮಪ್ಪ, ಬಾಲಚಂದ್ರ, ರೋಷನ್, ಕಾಂತರಾಜ್, ಹೆಗ್ಗೋಡು ಗ್ರಾಪಂ ಪಿಡಿಓ ಭುಜಂಗಪ್ಪ ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here