ಅಭಿಮಾನಿಗಳಿಂದ ರಸ್ತೆಗೆ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ಘೋಷಿಸಿ ನಾಮಫಲಕ ಅಳವಡಿಕೆ

0
769

ಶಿವಮೊಗ್ಗ: ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ನಗರದ ಚಾನಲ್ ರಸ್ತೆಗೆ ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ಸ್ವಯಂ ಘೋಷಣೆ ಮಾಡಿ ನಾಮಫಲಕ ಅಳವಡಿಸಿದ್ದಾರೆ.

ನಗರದ ಮಧ್ಯ ಭಾಗದಲ್ಲಿರುವ ಸಾವಿರಾರು ಜನವಾಸಿಗಳಿರುವ 1ಕಿ.ಮೀ ಉದ್ದದ ಲಕ್ಷ್ಮಿ ಟಾಕೀಸ್ ಹತ್ತಿರದ ಚಾನೆಲ್ ರಸ್ತೆಗೆ “ಪುನೀತ್‌ರಾಜಕುಮಾರ್ ರಸ್ತೆ” ಎಂದು ನಾಮಕರಣಗೊಳಿಸಿದ ಸಾರ್ವಜನಿಕರು ತಮ್ಮಗಳ ಅಭಿಮಾನವನ್ನು ಎತ್ತಿ ಹಿಡಿದು ಸ್ಥಳೀಯ ಮಹಾನಗರ ಪಾಲಿಕೆಗೆ ಅಧಿಕೃತಗೊಳಿಸಲು ಒತ್ತಾಯಿಸಿದ್ದಾರೆ.

ಆಕಸ್ಮಿಕವಾಗಿ ಮರಣವನ್ನಪ್ಪಿ ಜಗತ್ತಿಗೆ ವಿದಾಯ ಹೇಳಿದ ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿ ಪುನೀತ್ ರಾಜ್‍ಕುಮಾರ್ ನಾಡಿಗೆ ಕಲಾಬಳುವಳಿಯನ್ನು ಬಾಲ್ಯದಿಂದಲೇ ನೀಡಿದವರು ಅಲ್ಲದೆ, ಅವರು ತಮ್ಮ ಸಜ್ಜನಿಕೆಯ, ಸಹೃದಯಿತನದಿಂದ ಜನಮಾನಸದಲ್ಲಿ ನೆಲೆಯೂರಿ ಮಾದರಿಯಾಗಿದ್ದರು, ಅವರ ಅಗಲಿಕೆ ಅತೀವ ನೋವುಂಟು ಮಾಡಿದ್ದು ಅವರ ಕಲಾ ಹಾಗೂ ಸಾಮಾಜಿಕ ಜೀವನ ನಿರ್ವಹಣೆ ಕೋಟಿ, ಕೋಟಿ ಕನ್ನಡಿಗರಿಗೆ ಮಾದರಿಯಾಗಿ, ಸ್ಪೂರ್ತಿಯ ಸೆಲೆಯಾಗಿ ಬಾಹ್ಯಮುಖಿಯಲ್ಲಿ ಕಣ್ಮರೆಯಾದ ಎದೆನಾಯಕನಿಗೆ ಎಲ್ಲೆಡೆ ಬಿಸಿಗಂಬನಿಗಳು ಹರಿದು ಬಂದಿವೆ. ಶಿವಮೊಗ್ಗ ನಗರದಲ್ಲಿಯೂ ಇಂತಹದೊಂದು ಭಾವುಕತೆಯ ಬಿತ್ತಿ ಇದುವರೆಗೂ ಅನಾಮಧೆಯವಾಗಿ ಹಲವು ಹೆಸರುಗಳಿಂದ ಕರೆಯಲಾಗುತ್ತಿದ್ದ ಸುಮಾರು ಒಂದು ಕಿ.ಮೀ ಉದ್ದದ ರಸ್ತೆಗೆ ಸಾರ್ವಜನಿಕರೇ ಖುದ್ದು ಸೇರಿ ಯಾವುದೇ ರಾಜಕೀಯ ಬೆರೆಸದೆ ದೊಡ್ಡದೊಂದು ಶಾಶ್ವತವಾದ “ಪುನೀತ್ ರಾಜ್‍ಕುಮಾರ್ ರಸ್ತೆ” ಎಂದು ನಾಮ ಫಲಕವನ್ನು ಸ್ಥಾಪಿಸಿ ಉದ್ಘಾಟಿಸಿರುವುದು ಶ್ಲಾಘನೀಯವಾಗಿದೆ.

ಶಿವಮೊಗ್ಗದ ಅನೇಕ ಕನ್ನಡ ಪರ ಸಂಘಟನೆಗಳ ಕಟ್ಟಾಳುಗಳು ಇಲ್ಲಿಗೆ ಬೇಟಿ ನೀಡಿ ಶಾಶ್ವತವಾಗಿ ಇದನ್ನು ನಾಮಾಂಕಿತಗೊಳಿಸಿ ಆದೇಶಿ ಸಲು ಮಹಾನಗರ ಪಾಲಿಕೆಗೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ.

ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ರವರುಗಳು ಸಾರ್ವಜನಿಕರು ಉದ್ಘಾಟಿಸಿರುವ ಈ ನಾಮಫಲಕವನ್ನು ಗೌರವಿಸಿ ಯಾವುದೇ ತಗಾದೆಗಳಿಲ್ಲದೆ, ಈ ರಸ್ತೆಗೆ ಸಾರ್ವಜನಿಕರ ಆಶಯ ಹಾಗೂ ಅಭಿಮಾನಕ್ಕೆ ಮನ್ನಣೆ ನೀಡಿ “ಪುನೀತ್ ರಾಜ್‍ಕುಮಾರ್ ರಸ್ತೆ ಎಂದು ಅಧಿಕೃತಗೊಳಿಸಿ ಆದೇಶಿಸಬೇಕೆಂದು ಸೂರ್ಯಗಗನ ಪತ್ರಿಕೆಯ ಒತ್ತಾಯವು ಆಗಿದೆ.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಜ್ಯೋತಿ ಅರಳಪ್ಪ, ಪ್ರಜಾಕೀಯ ವೆಂಕಟೇಶ್, ನರಸಿಂಹ ಗಂಧದಮನೆ, ಹರೀಶ್, ಸಿದ್ದರಾಜ್, ಮತ್ತು ಸಾರ್ವಜನಿಕರು ಮುಖಂಡರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here