20.6 C
Shimoga
Friday, December 9, 2022

ಅಮರ ಜ್ಯೋತಿ ಕಾರ್ಯಕ್ರಮದಡಿ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್


ಶಿವಮೊಗ್ಗ : ಅಮೃತ ಜ್ಯೋತಿ ಕಾರ್ಯಕ್ರಮದಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಎಲ್ಲ ಕುಟುಂಬಕ್ಕೆ ಮಾಸಿಕ 75 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.


ಈ ಸೌಲಭ್ಯ ಪಡೆಯಲು ಫಲಾನುಭವಿಗಳು ದಿನಾಂಕ: 30-04-2022 ರ ಅಂತ್ಯಕ್ಕೆ ಬಾಕಿ ಇರುವ ವಿದ್ಯುತ್ ಮೊತ್ತವನ್ನು ಸಂಪೂರ್ಣವಾಗಿ ಪಾವತಿ ಮಾಡಿರಬೇಕು. ಮಾಸಿಕ ವಿದ್ಯುತ್ ಬಳಕೆ ಗರಿಷ್ಟ 250 ಯುನಿಟ್‍ಗಳನ್ನು ಮೀರಬಾರದು. ಮಾಪಕ ಅಳವಡಿಕೆ ಮತ್ತು ಮಾಪಕವನ್ನು ಕಡ್ಡಾಯವಾಗಿ ಓದಲಾಗುವುದು.


ಬಿಪಿಎಲ್ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರ (ಆರ್‍ ಡಿ ಸಂಖ್ಯೆ ಸಹಿತ) ದಾಖಲೆ ನೀಡಬೇಕು. 75 ಯೂನಿಟ್‍ಗಳವರೆಗೆ ಬಳಕೆಯ ವಿದ್ಯುತ್ ಶುಲ್ಕವನ್ನು ಡಿಬಿಟಿ ಮುಖಾಂತರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.


ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ‘ಸುವಿಧಾ’ ಪೋರ್ಟಲ್ ಅಥವಾ ಸಂಬಂಧಿಸಿದ ಮೆಸ್ಕಾಂ ಉಪವಿಭಾಗ/ಶಾಖಾ ಕಚೇರಿಗೆ ಭೇಟಿ ನೀಡಿ ಆನ್‍ಲೈನ್‍ನಲ್ಲಿ ನೋಂದಾಯಿಸಿ ಈ ಸೌಲಭ್ಯವನ್ನು ಪಡೆಯಬಹುದೆಂದು ವೀರೇಂದ್ರ ಹೆಚ್.ಆರ್ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ಕಾರ್ಯ ಮತ್ತು ಪಾಲನೆ ವಿಭಾಗ, ಮೆಸ್ಕಾಂ ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!