ಅಮಾನತುಪಡಿಸಿಕೊಂಡಿದ್ದ 193 ಕೆಜಿ ಗಾಂಜಾ ನಾಶ !

0
335

ಶಿವಮೊಗ್ಗ:‌ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಪರಾಧ ಪ್ರಕರಣದಲ್ಲಿ ಅಮಾನತುಪಡಿಸಿಕೊಂಡಿದ್ದ 193 ಕೆಜಿ 498 ಗ್ರಾಂ ಗಾಂಜಾವನ್ನ ನಾಶಪಡಿಸಲಾಯಿತು.

ಅಮಾನತುಪಡಿಸಿಕೊಂಡ ಗಾಂಜಾದ ಅಂದಾಜು ಮೌಲ್ಯ 38,07,450 ರೂ.ಗಳ ಒಟ್ಟು 193 ಕೆ.ಜಿ. 498 ಗ್ರಾಂ ತೂಕದ ಮಾದಕ ವಸ್ತು ಗಾಂಜಾವನ್ನು ಇಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ವಿಲೇವಾರಿ ಮಾಡಲಾಗಿದೆ.

ಶಿವಮೊಗ್ಗ ಜಿಲ್ಲೆಯ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರು, ಪರಿಸರ ಅಧಿಕಾರಿಗಳು ಮತ್ತು ಪಂಚರ ಸಮಕ್ಷಮ ಮಾಚೇನಹಳ್ಳಿಯ ಶುಶ್ರೂತಾ ಬಯೋ ಮೆಡಿಕಲ್ ತಾಜ್ಯ ಸಂಸ್ಕರಣಾ ಕೇಂದ್ರದಲ್ಲಿ ನಾಶಪಡಿಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here