ಅಮಾಯಕ ಮಗುವಿನ ಹತ್ಯೆಗೆ ಹೊಣೆ ಯಾರು…… !?

0
1800

ಹೊಸನಗರ : ತಾಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಚಿಟ್ಟೆಗದ್ದೆಯ ಮುದ್ದು ಮುಖದ 03 ವರ್ಷದ ತನ್ವಿ ಹತ್ಯೆಗೆ ಹೊಣೆ ಯಾರು ?

ಅಜ್ಜ, ಅಜ್ಜಿ, ತಂದೆ ಅಥವಾ ಲೋಕದ ಅರಿವಿಲ್ಲದ ಚಂದದ ಮುಖದ ಮುಗ್ಧ ಬಾಲಕಿಯನ್ನು ವೇಲಿನಿಂದ ಸೊಂಟಕ್ಕೆ ಕಟ್ಟಿ ಬಾವಿಗೆ ಹಾರಿದ ತಾಯಿ ವಿದ್ಯಾ ಕಾರಣವಾದರೆ 2014 ರಲ್ಲಿ ಚಿಟ್ಟೆಗದ್ದೆಯ ಲೋಹಿತ್ ಎಂಬುವರೊಂದಿಗೆ ಮದುವೆಯಾಗಿದ್ದ ವಿದ್ಯಾ, ಅತ್ತೆ, ಮಾವ ಮತ್ತು ಗಂಡನ ಕಿರುಕುಳದಿಂದ ಬೇಸತ್ತು ವೇಲಿನಿಂದ ತನ್ನ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಬುಧವಾರ ತಡರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿದ್ಯಾಳ ಪೋಷಕರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಏನೂ ಅರಿಯದ ಮುಗ್ಧ ಕಂದಮ್ಮಳ ಹತ್ಯೆಗೆ ಹೊಣೆ ಯಾರು ? ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಜಾಹಿರಾತು

LEAVE A REPLY

Please enter your comment!
Please enter your name here