ಅಮಿತ್‌ ಶಾ ವಜಾಕ್ಕೆ ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ

0
672

ರಿಪ್ಪನ್‌ಪೇಟೆ: ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಟಿವಿ ಸಂದರ್ಶನದಲ್ಲಿ ಶಿಕ್ಷಣ ಪಡೆಯದ ಜನರು ದೇಶಕ್ಕೆ ಹೊರೆ ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ. ಶಿಕ್ಷಣ ಪಡೆಯದ ಜನರು ದೇಶದ ಹೊರೆಯಾಗುತ್ತಾರೆ ಅನಕ್ಷರಸ್ಥರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ. ಅನಕ್ಷರಸ್ಥ ವ್ಯಕ್ತಿ ಸಂವಿಧಾನದ ಹಕ್ಕು ತಿಳಿಯುವುದಿಲ್ಲ ಎಂದು ಅತಿ ಕೀಳಾಗಿ ಮಾತನಾಡಿರುವ ಕೇಂದ್ರದ ಗೃಹ ಸಚಿವ ಅಮಿತ್ ಶಾ ರವರು ಬಹಿರಂಗವಾಗಿ ಕ್ಷೇಮೆ ಯಾಚಿಸಬೇಕು ಇಲ್ಲದಿದ್ದರೆ ರಾಷ್ಟ್ರಪತಿಗಳು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಮಾಜಿ ಪ್ರಧಾನಕಾರ್ಯದರ್ಶಿ ಆರ್.ಎ.ಚಾಬುಸಾಬ್, ಮುಖಂಡರಾದ ಆರ್.ಎನ್.ಮಂಜುನಾಥ, ಮುಡುಬ ಧರ್ಮಪ್ಪ ನೇತೃತ್ವದಲ್ಲಿ ನಾಡಕಛೆರಿಯ ಉಪತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.

ಈ ಹಿಂದಿನ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಮತ್ತು ದೇವರಾಜ್ ಅರಸುರವರು ತಮ್ಮ ಅಧಿಕಾರಾವಧಿಯಲ್ಲಿ ಸಂದರ್ಭಕ್ಕೆ ತಕ್ಕಂತೆ ಜನರು ಬಡತನದಲ್ಲಿ ಜೀವನ ಸಾಗಿಸಿದಂತಹ ಸಂದಬ್ದಲ್ಲಿ ವಿದ್ಯೆಯ ಮಹತ್ವ ತಿಳಿಯದೆ ತಪ್ಪಾಗಿದ್ದು ಮುಂದಿನ ಪೀಳಿಗೆ ವಿದ್ಯಾಭ್ಯಾಸಕ್ಕೆ ಹೊಂದಿಕೊಂಡು ಹೋಗಲು ಹೇಳಿ ಈ ದೇಶದ ಅವಿದ್ಯಾವಂತರು ಅನಕ್ಷರಸ್ಥರು ರೈತರು ಈ ದೇಶದ ಬೆನ್ನೆಲುಬು ಎಂದು ಸಾರಿ ಹೇಳಿದರು. ಆದರೆ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಹೇಳಬೇಕಾದ ವಿಚಾರವನ್ನು ಹೇಳದೆ ಅನಕ್ಷರಸ್ಥರ ಮತ್ತು ಅವಿದ್ಯಾವಂತ ಯುವಜನಾಂಗವನ್ನು ಕೀಳು ಭಾವನೆಯಲ್ಲಿ ಹೇಳಿರುವುದು ಅವರ ಘನತೆಗೆ ಶೋಭೆ ತರದು ಎಂದು ತೀವ್ರವಾಗಿ ಖಂಡಿಸಿ ರಾಷ್ಟ್ರಪತಿಯವರು ತಕ್ಷಣವೇ ಇಂತಹ ಬೇಜವಾಬ್ದಾರಿ ಸಚಿವರನ್ನು ವಜಾಗೊಳಿಸಿ ಇಲ್ಲವೆ ಬಹಿರಂಗ ಕ್ಷಮೆಯಾಚಿಸುವಂತೆ ಸೂಚಿಸುವಂತೆ ಮನವಿ ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಜೋಜಿರಾವ್, ಶಿವಾಜಿರಾವ್, ಗಾಡಿಶೇಖರ, ಮಲ್ಲೇಶ ಆಲವಳ್ಳಿ ಕೃಷ್ಣೋಜಿರಾವ್, ಲೋಕಪ್ಪ ಗವಟೂರು, ಧರ್ಮಣ್ಣ, ಖಾದರಿ ಇನ್ನಿತರ ಹಲವರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here