ಅಮ್ಮನವರ ಕ್ಷೇತ್ರಗಳಾದ ಸಿಗಂದೂರು ಹಾಗೂ ಕೊಲ್ಲೂರು ಈಗ ಹೊಸನಗರದಿಂದ ತೀರಾ ಹತ್ತಿರ….!

0
23196

ಹೊಸನಗರ : ಪ್ರಸಿದ್ಧ ಯಾತ್ರಾ ಸ್ಥಳಗಳಾದ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಸನ್ನಿಧಿ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿ ಹೊಸನಗರ ಭಾಗದ ಪ್ರಯಾಣಿಕರಿಗೆ ಈಗ ತೀರಾ ಹತ್ತಿರವಾಗಿದೆ.

ನಿಟ್ಟೂರು ಮಾರ್ಗವಾಗಿ ಸಿಗಂದೂರು ತಲುಪಲು 77 ಕಿ.ಮೀ. ಕ್ರಮಿಸಬೇಕಾಗಿತ್ತು, ಐತಿಹಾಸಿಕ ಪಟಗುಪ್ಪ ಸೇತುವೆ ನಿರ್ಮಾಣವಾದ ಕಾರಣ ಹುಲಿದೇವರಬನ ಮಾರ್ಗವಾಗಿ ಸಿಗಂದೂರು ಕ್ಷೇತ್ರ ತಲುಪಲು ಈಗ ಅರ್ಧದಷ್ಟು ದೂರ ಕಡಿಮೆಯಾಗಲಿದೆ.

ಈಗಾಗಲೆ ಗಣೇಶ್ ಪ್ರಸಾದ್ ಬಸ್ಸಿನವರು ಪಟಗುಪ್ಪ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಿದ್ದು ನಾಳೆ ಸೋಮವಾರದಿಂದ ಶೃಂಗಗಿರಿ ಬಸ್ ಸಹ ಸಂಚಾರ ಮಾಡಲಿದೆ.

ಸಂಕೂರಿನಿಂದ ಬೆಳಿಗ್ಗೆ 7:45ಕ್ಕೆ ಹೊರಡುವ ಈ ಬಸ್, ಭೀಮನಕೆರೆ, ಪಟಗುಪ್ಪ ಮಾರ್ಗವಾಗಿ ಹುಲಿದೇವರಬನ ತಲುಪಲಿದೆ. ಅಲ್ಲಿಂದ ಶ್ರೀ ಕ್ಷೇತ್ರ ಸಿಗಂದೂರು ಹಾಗೂ ಕೊಲ್ಲೂರುಗಳಿಗೆ ಬಸ್‌ಗಳ ವ್ಯವಸ್ಥೆ ದೊರಕಲಿದೆ. ಹುಲಿದೇವರಬನದಿಂದ ಬೆಳಗ್ಗೆ 8.45ಕ್ಕೆ ಬಿಟ್ಟು ಪಟಗುಪ್ಪ ಮಾರ್ಗವಾಗಿ ಹೊಸನಗರ ಬಂದು ಮಾವಿನಕಟ್ಟೆ, ಆನೆಗದ್ದೆ, ಬಿಲ್ಲೇಶ್ವರ, ಗರ್ತಿಕೆರೆ ಮಾರ್ಗವಾಗಿ ರಿಪ್ಪನ್‌ಪೇಟೆ ಮೂಲಕ ಹೊಸನಗರ ತಲುಪಲಿದೆ.

ಹೊಸನಗರದಿಂದ ಮಧ್ಯಾಹ್ನ 2ಗಂಟೆಗೆ ಪುನಃ ಪಟಗುಪ್ಪ ಮಾರ್ಗವಾಗಿ ಹುಲಿದೇವರಬನಕ್ಕೆ ತೆರಳಿ 2.45ಕ್ಕೆ ಹುಲಿದೇವರಬನದಿಂದ ಪಟಗುಪ್ಪ ಮಾರ್ಗವಾಗಿ ಹೊಸನಗರಕ್ಕೆ ಬರಲಿದ್ದು, ಈ ಭಾಗದ ಪ್ರಯಾಣಿಕರು ಈ ಬಸ್ಸಿನ ಸೌಲಭ್ಯ ಪಡೆಯಬೇಕೆಂದು ಬಸ್ಸಿನ ವ್ಯವಸ್ಥಾಪಕರು ಕೋರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here