ಅರಣ್ಯ ಇಲಾಖೆಯಿಂದ ವಿಶೇಷ ಗೌರವ: ಆನೆ ಮರಿಯೊಂದಕ್ಕೆ ನಟ ‘ಪುನೀತ್’ ಹೆಸರು !

0
273

ಶಿವಮೊಗ್ಗ: ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಮರಿಯಾನೆಯೊಂದಕ್ಕೆ ನಟ ಪುನೀತ್ ರಾಜ್‍ಕುಮಾರ್ ರವರ ಹೆಸರಿಡುವ ಮೂಲಕ ಅರಣ್ಯ ಇಲಾಖೆ ಅಗಲಿದ ನಟನಿಗೆ ವಿಶೇಷ ಗೌರವ ಸಲ್ಲಿಸಿದೆ.

ಎರಡು ತಿಂಗಳ ಹಿಂದೆ ಪುನೀತ್ ರಾಜ್‍ಕುಮಾರ್ ರವರು ಇದೇ ಮರಿಯಾನೆಗೆ ಮುದ್ದಿಸಿದ್ದರು. ಆ ಕಾರಣಕ್ಕಾಗಿ ಈ ಆನೆ ಮರಿಗೆ ಅವರ ಹೆಸರಿಡಲಾಗಿದೆ. ಇಂದು ಆನೆ ಮರಿಯನ್ನು ತಾಯಿ ಆನೆ ನೇತ್ರಾಳಿಂದ ಬೇರ್ಪಡಿಸುವ ಕಾರ್ಯ ನಡೆದಿದೆ. ಇದಕ್ಕೆ ವೀನಿಂಗ್ ಎಂದು ಕರೆಯಲಾಗುತ್ತದೆ.

ಇದುವರೆಗೂ ಆನೆಗಳಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ದೇವರ ಹೆಸರನ್ನು ಇಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಚಿತ್ರ ನಟರೊಬ್ಬರ ಹೆಸರಿಡಲಾಗಿದೆ. ಈ ಮೂಲಕ ಕರ್ನಾಟಕದ ಪ್ರೀತಿಯ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲಾಗಿದೆ.

ನಟ ಪುನೀತ್ ರಾಜ್‌ಕುಮಾರ್ ವನ್ಯಜೀವಿಗಳು, ಕಾಡಿನ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು. ಅವರಿಗೆ ವನ್ಯಪ್ರಾಣಿಗಳ ರಕ್ಷಣೆಯ ಕನಸಿತ್ತು. ಬಿಡಾರಕ್ಕೆ ಭೇಟಿ ನೀಡಿದ್ದ ಅವರು ಅರಣ್ಯ ಸಂರಕ್ಷಣೆ ಕುರಿತ ಸಾಕ್ಷ್ಯ ಚಿತ್ರವೊಂದರಲ್ಲಿ ನಟಿಸಿದ್ದರು. ಹಾಗಾಗಿ, ಅವರ ಹೆಸರು ನಾಮಕರಣ ಮಾಡಿದ್ದೇವೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ.ಎಂ.ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.

.

ಜಾಹಿರಾತು

LEAVE A REPLY

Please enter your comment!
Please enter your name here