20.6 C
Shimoga
Friday, December 9, 2022

ಅರಣ್ಯ ಇಲಾಖೆ ಸಿಬ್ಬಂದಿಗಳ ದಾಳಿ ;
₹ 2 ಲಕ್ಷ ಮೌಲ್ಯದ ತೇಗದ ತುಂಡುಗಳು ವಶಕ್ಕೆ !


ಹೊಸನಗರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ತಾಲೂಕಿನ 18ನೇ ಮೈಲಿಕಲ್ಲಿನ ಸಮೀಪದ ದೊಡ್ಡಕೊಳವಳ್ಳಿ ಗ್ರಾಮದ ಸುಗಂಧರಾಜ್ ಎಂಬುವವರಿಗೆ ಸೇರಿದ ಮನೆಯ ಸಮೀಪದಲ್ಲಿ ಅಕ್ರಮ ಕಡಿತಲೆ ಮಾಡಿ ಸಂಗ್ರಹಿಸಿಟ್ಟಿದ್ದ ಸುಮಾರು ರೂ. 2ಲಕ್ಷ ಮೌಲ್ಯದ ತೇಗದ ಮರದ ನಾಟ ಹಾಗೂ ಸೈಜ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಗ್ರಾಮಠಾಣೆ ವ್ಯಾಪ್ತಿಯಲ್ಲಿ ಬೆಳೆದಿದ್ದ ತೇಗದ ಮರಗಳನ್ನು ಅಕ್ರಮವಾಗಿ ಕಡಿದು, ಸ್ಶೆಜ್‌ಗಳಾಗಿ ಪರಿವರ್ತಿಸಿದ್ದು, ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.


ವಲಯ ಅರಣ್ಯ ಅಧಿಕಾರಿ ಎಂ. ರಾಘವೇಂದ್ರ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಉಪವಲಯ ಅರಣ್ಯಾಧಿಕಾರಿ ಯುವರಾಜ್, ಮೌನೇಶ್ ಬಿರದಾರ್, ಗಾರ್ಡ್ ಸುರೇಶ್, ಚಾಲಕ ಜಗದೀಶ್ ದಾಳಿಯಲ್ಲಿ ಭಾಗವಹಿಸಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!