ಅರಣ್ಯ ನಮ್ಮ ಜೀವ ರಕ್ಷಕ ಕವಚ: ಎನ್.ಆರ್ ದೇವಾನಂದ್

0
583

ಹೊಸನಗರ: ಚಿಕ್ಕಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುತ್ತಲ ಗ್ರಾಮದಲ್ಲಿ ಸಾರ ಸಂಸ್ಥೆ, ನಾಡ ಚಾವಡಿ, ಸುಬ್ಬಣ್ಣ ರಂಗ ಸಮೂಹ, ಪರಿಸರ ಆಸಕ್ತ ಬಳಗ, ಅರಣ್ಯ ಇಲಾಖೆಯ ಸಹಯೋಗ ಸ್ವ ಗ್ರಾಮ ಸಮಿತಿ ಹಾಗೂ ಅದರ ಅಂಗ ಸಮಿತಿಗಳ ಮೇಲ್ವಿಚಾರಣೆಯಲ್ಲಿ ಕಿರು ಅರಣ್ಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್. ಅರ್ ದೇವಾನಂದ್ ಚಾಲನೆ ನೀಡಿ ಮಾತನಾಡಿ, ಮಲೆನಾಡಿನಲ್ಲಿ ಅರಣ್ಯ ನಿರ್ಮಾಣ ಮಾಡುವ ಅಗತ್ಯ ನಿರ್ಮಾಣ ಆಗಬಾರದಿತ್ತು. ಹಾಗೆಯೇ ಮಲೆನಾಡು ಬರಗಾಲ ಪೀಡಿತ ಪ್ರದೇಶ ಎಂದೂ ಗುರುತಿಸಿಕೊಳ್ಳಬಾರದಿತ್ತು. ಆದರೆ ಅದೆರೆಡು ಕೂಡ ನಮ್ಮ ಸಂದರ್ಭದಲ್ಲಿ ಕಾಣಿಸಿಕೊಂಡು ಆಗಿದೆ. ಕಾಡಿದ್ದರೆ ನಾಡು ಸುಭೀಕ್ಷಾ ಆಗಲು ಸಾಧ್ಯ, ಅದರಿಂದ ಮಳೆ, ಅದರ ಮೂಲಕ ಜಲ, ತನ್ಮೂಲಕ ಕೃಷಿ ಸಂವೃದ್ದಿ. ಒಟ್ಟಾರೆ ನಮ್ಮನ್ನು ಒಳಗೊಂಡಂತೆ ಜೀವ ವೈವಿಧ್ಯಗಳ ರಕ್ಷಣೆಯನ್ನು ಪಶ್ಚಿಮ ಘಟ್ಟದ ಅರಣ್ಯ ಪ್ರದೇಶ ರಕ್ಷಾ ಕವಚದಂತೆ ನಮ್ಮನ್ನು ಕಾಪಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವುಗಳು ನಮ್ಮ ನಡುವಿನ, ಪರಿಸರ ಹಾಗೂ ಅರಣ್ಯ ಪ್ರದೇಶ ರಕ್ಷಣೆ ಹಾಗೂ ಪೋಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಮುತ್ತಲ ಗ್ರಾಮದ ಹೃದಯ ಭಾಗದಲ್ಲಿ ಕಿರು ಪ್ರದೇಶ ಆಯ್ಕೆ ಮಾಡಿಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳ ನೆರವು ಹಾಗೂ ಸಹಕಾರ ಪಡೆದುಕೊಂಡು ಒಂದೇ ಪ್ರದೇಶದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ಕಾಡುಜಾತಿಯ ಗಿಡಗಳೊಂದಿಗೆ ಹಣ್ಣಿನ ಗಿಡಗಳನ್ನು ಸೇರಿಸಿ ಸಾವಿರದ ಇನ್ನೂರು ಗಿಡಗಳನ್ನು ನೆಡುವ ಮೂಲಕ ಕಿರು ನೈಸರ್ಗಿಕ ದಟ್ಟ ಕಾಡು ನಿರ್ಮಾಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಮುಂದಾಗಿದ್ದಾರೆ. ಈ ಕಾರ್ಯದಲ್ಲಿ ಶಿವಮೊಗ್ಗ ಬಾಲಕೃಷ್ಣ ನಾಯ್ಡು ಅವರು ವಿವಿಧ ಜಾತಿಯ 500 ಗಿಡ ಒದಗಿಸಿದ್ದಾರೆ. ಈ ಪ್ರಯತ್ನ ಹೊಸನಗರ ತಾಲೂಕಿನಲ್ಲಿ ಪ್ರಥಮ ಬಾರಿಗೆ ನಡೆದಿದೆ.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ತಾಪಂ ಮಾಜಿ ಸದಸ್ಯ ಚಂದ್ರಮೌಳಿ, ಪಪಂ ಸದಸ್ಯ ಅಶ್ವಿನಿ ಕುಮಾರ್, ಮಾರುತಿಪುರ ಗ್ರಾಪಂ ಅಧ್ಯಕ್ಷ ಚಿದಂಬರ್, ಹರತಾಳು ಗ್ರಾಪಂ ಅಧ್ಯಕ್ಷ ಕಲ್ಲಿ ಯೋಗೇಂದ್ರ, ಪುರಪ್ಪೇಮನೆ ಗ್ರಾಮ ಪಂಚಾಯತ್ ಅಧ್ಯಕ್ಷರು ಜೈ ಪ್ರಕಾಶ್ ಶೆಟ್ಟಿ, ಕಡೆಕಲ್ ನಾಗರಾಜ್, ಸದಾಶಿವ ಶೆಟ್ಟಿ ಡಿ.ಎಂ, ಬಾಲಕೃಷ್ಣ ನಾಯ್ಡು ಶಿವಮೊಗ್ಗ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಇಂದ್ರೇಶ್, ಶಿವಮೂರ್ತಿ, ನಾರಿ ರವಿ, ಸುಧಾಕರ್, ರಾಧಾ ಕೃಷ್ಣಪ್ಪ, ಉಪ ಪ್ರಾಂಶುಪಾಲರಾದ ಕೆಸುವಿನಮನೆ ರತ್ನಾಕರ್, ಗ್ರಾರ್ಗಿ, ಮಾಧ್ಯಮ ಮಿತ್ರರು, ಗೋಪಾಲ್ ಮೂರ್ತಿ ಭಾಗವತರು, ಉದ್ಯಮಿ ಉದಯ ನಾಯಕ್, ಉಪನ್ಯಾಸಕ ದಂಪತಿಗಳಾದ ರತ್ನಾಕರ್, ಪ್ರತಿಮಾ, ಶಾಂತ ಮೂರ್ತಿ ಗುರೂಜಿ ಶಾಲೆ, ಮಂಜುನಾಥ್ ಬ್ಯಾಣದ್, ನಾಸಿರ್, ಆನಂದಪುರ ರಾಯಲ್ ಕ್ಲಬ್ ಸದಸ್ಯರು, ಸ್ವ ಗ್ರಾಮ ಯೋಜನೆ ಸಂಚಾಲಕ ಯೇಸು ಪ್ರಕಾಶ್, ಸಾರ ಸಂಸ್ಥೆ ಯ ಧನುಷ್, ಶಿವಕುಮಾರ್, ಕುಮಾರ್, ಸ್ವ ಗ್ರಾಮ ಸಮಿತಿ ಅಧ್ಯಕ್ಷ ಗುರುಮೂರ್ತಿ, ಸಂಚಾಲಕ ರಮೇಶ್ ಹೊಸಳ್ಳಿ, ಸತೀಶ್ ಹಂಜ, ಶಂಕರಪ್ಪ ಮತ್ತು ಗ್ರಾಮಸ್ಥರು ಹಾಜರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here