ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾದ ಸ್ವಿಫ್ಟ್ ಕಾರು ಮತ್ತು ಮೃತದೇಹ ಪತ್ತೆ !

0
16353

ತೀರ್ಥಹಳ್ಳಿ: ತಾಲ್ಲೂಕಿನ ಸಾಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಮಿಟ್ಲುಗೋಡು ಎಂಬಲ್ಲಿ ದಟ್ಟ ಅರಣ್ಯ ಪ್ರದೇಶದಲ್ಲಿ, ಕೆಲವೇ ದಿನಗಳ ಹಿಂದೆ ಸುಟ್ಟು ಕರಕಲಾಗಿರಬಹುದಾದ ಮಾರುತಿ ಕಂಪನಿಯ ಸ್ವಿಫ್ಟ್ ಕಾರೊಂದು ಪತ್ತೆಯಾಗಿದ್ದು, ಅದರೊಳಗೆ ಒಬ್ಬ ವ್ಯಕ್ತಿಯ ಕಳೇಬರ ಸಹ ಪೂರ್ಣ ಪ್ರಮಾಣದಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಕಂಡು ಬಂದಿದೆ.

ಇಂದು ಬೆಳಿಗ್ಗೆ ಸೌದೆಗಾಗಿ ಆ ಭಾಗದ ಗ್ರಾಮೀಣರು ಅತ್ತ ಹೋಗಿದ್ದಾಗ, ಬಣ್ಣ, ನೋಂದಣಿ ಸಂಖ್ಯೆಯ ಗುರುತೂ ಸಿಗದಷ್ಟರ ಮಟ್ಟಿಗೆ ಬೆಂಕಿಗಾಹುತಿಯಾದ ಕಾರು ಮತ್ತು ವ್ಯಕ್ತಿಯ ಕಳೇಬರ ಕಣ್ಣಿಗೆ ಬಿದ್ದಿದೆ. ಗಾಬರಿಯಾದ ಅವರುಗಳು ಪೊಲೀಸ್ ಇಲಾಖೆಗೆ ತಕ್ಷಣವೇ ಸುದ್ದಿ ಮುಟ್ಟಿಸಿದ್ದಾರೆ. ತಡಮಾಡದೇ ಸ್ಥಳಕ್ಕೆ ಧಾವಿಸಿದ ತೀರ್ಥಹಳ್ಳಿ ಪೊಲೀಸರು ಸುಟ್ಟ ಕಾರಿನ ಮತ್ತು ವ್ಯಕ್ತಿಯ ಗುರುತು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here