ರಿಪ್ಪನ್ಪೇಟೆ: ಸಮೀಪದ ಇತಿಹಾಸ ಪ್ರಸಿದ್ದ ಶ್ರೀ ಈಶ್ವರ-ಬಸವಣ್ಣ ದೇವಸ್ಥಾನ ಸಂಪೂರ್ಣ ಶಿಥಿಲಗೊಂಡಿದ್ದು ಈ ದೇವಸ್ಥಾನದ ಜೀರ್ಣೋದ್ದಾರದೊಂದಿಗೆ ಸುಸಜ್ಜಿತ ದೇವಾಲಯ ನಿರ್ಮಿಸುವ ಮೂಲಕ ಇದೇ ಮೇ 6 ಮತ್ತು 7 ರಂದು ನೂತನ ಕಟ್ಟಡದ ಲೋಕಾರ್ಪಣೆ ಮತ್ತು ಶ್ರೀ ಈಶ್ವರ-ಬಸವಣ್ಣ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಧರ್ಮಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಮಾಣಿಕೆರೆ ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಳಲಿಮಠದ ಡಾ.ಷ.ಬ್ರ.ಗುರುನಾಗಭುಷಣ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ ಮೇ 6 ರಂದು ಸಂಜೆ 6-30 ಕ್ಕೆ ನೂತನ ದೇವಾಲಯ ಪ್ರವೇಶ, ಗಣಹೋಮ ಮತ್ತು ವಾಸ್ತುಹೋಮ, ಮೇ 7 ರಂದು ಶನಿವಾರ ಬೆಳಗ್ಗೆ ನ್ಯಾಸ, ಅಭಿಷೇಕ, ಕಳಸಪೂಜೆ, ರುದ್ರಹೋಮ, ನವಗ್ರಹ ಹೋಮ, ಕಲಾಹೋಮ ಮತ್ತು ಪೂಜಾಪ್ಣೆಯೊಂದಿಗೆ ದೇವಸ್ಥಾನದ ಪ್ರವೇಶೋತ್ಸವ ಹಾಗೂ ಶ್ರೀ ಈಶ್ವರಸ್ವಾಮಿ ಬಸವಣ್ಣ ದೇವರು ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಟಾಪನೆ ನೆರವೇರಲಿದೆ.
ಮಹಾಮಂಗಳಾರತಿ ತೀರ್ಥ ಪ್ರಸಾದ ಕಳಸಾರೋಹಣ ವಿನಿಯೋಗ ನಂತರ 12-30 ಕ್ಕೆ ಧರ್ಮ ಸಭೆಯೊಂದಿಗೆ ಸಾಮೂಹಿಕ ಅನ್ನ ಸಂತರ್ಪಣೆ ಜರುಗಲಿದೆ ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನಾಶೀರ್ವಾದ ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ.