23.2 C
Shimoga
Sunday, November 27, 2022

ಅರಸಾಳು ಗ್ರಾಪಂ ನೂತನ ಅಧ್ಯಕ್ಷರಾಗಿ ಉಮೇಶ್ ಕಡೆಗದ್ದೆ ಹಾಗೂ ಉಪಾಧ್ಯಕ್ಷರಾಗಿ ಶಾಂತಕುಮಾರಿ ರವೀಂದ್ರ ಆಯ್ಕೆ ; ಅಭಿನಂದನೆ

ರಿಪ್ಪನ್‌ಪೇಟೆ : ರಾಜೀನಾಮೆಯಿಂದ ತೆರವಾಗಿದ್ದ ಅರಸಾಳು ಗ್ರಾಪಂನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಕೆ.ಎನ್. ಉಮೇಶ್ ಕಡೆಗದ್ದೆ ಹಾಗು ಉಪಾಧ್ಯಕ್ಷರಾಗಿ ಶಾಂತಕುಮಾರಿ ರವೀಂದ್ರ ಆಯ್ಕೆಯಾಗಿದ್ದಾರೆ.

ಒಟ್ಟು 12 ಸಂಖ್ಯಾ ಬಲದ ಸದಸ್ಯರನ್ನು ಹೊಂದಿರುವ ಅರಸಾಳು ಗ್ರಾಪಂಗೆ ಈ ಹಿಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿತ ಉಮೇಶ್ ಕಡೆಗದ್ದೆಗೆ 7 ಮತ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಯೋಗೇಂದ್ರನಾಯ್ಕ 4 ಮತ ಪಡೆದರು. ಈ ಮೂಲಕ ಅಧ್ಯಕ್ಷರಾಗಿ ಉಮೇಶ್ ಆಯ್ಕೆಯಾದರು.

ಇನ್ನೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಶಾಂತಕುಮಾರಿ 6 ಮತ ಪಡೆದರೆ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಪುಷ್ಪ 5 ಮತ ಪಡೆದಿದ್ದರಿಂದ ಶಾಂತಕುಮಾರಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಓರ್ವ ಸದಸ್ಯೆ ಗೈರು ಹಾಜರಾಗಿದ್ದರಿಂದ 11 ಸದಸ್ಯರು ಮಾತ್ರ ಈ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.

ಅಭಿನಂದನೆ :

ಇದೇ ಮೊದಲ ಬಾರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಕುಣಬಿ ಜನಾಂಗಕ್ಕೆ ಒಂದೇ ಗ್ರಾಪಂನಲ್ಲಿ ದೊರೆತಿರುವುದು ಅತ್ಯಂತ ಹರ್ಷ ತಂದಿದೆ ಎಂದು ಶಿವಮೊಗ್ಗ ಜಿಲ್ಲಾ ಕುಣಬಿ ಸುಧಾರಣಾ ಸಮಿತಿಯು ನೂತನ ಅಧ್ಯಕ್ಷ ಉಮೇಶ್ ಮತ್ತು ಉಪಾಧ್ಯಕ್ಷೆ ಶಾಂತಕುಮಾರಿಯನ್ನು ಈ ಮೂಲಕ ಅಭಿನಂದಿಸಿ ಶುಭಹಾರೈಸಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!