ಅರಸಾಳು: ನೆಲೆ ಕಾಣದ ಅಲೆಮಾರಿ ಕುಟುಂಬಗಳು…! ಶಾಶ್ವತ ಮುಕ್ತಿ ಎಂದು….!?

0
1038

ರಿಪ್ಪನ್‌ಪೇಟೆ: ತಾಲ್ಲೂಕಿನ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲೆಮಾರಿ ಕುಟುಂಬಗಳು ಕೆಲವರು ವಾಸವಾಗಿದ್ದಾರೆ. ಆಗಾಗ್ಗೆ ಈ ಗ್ರಾಮಕ್ಕೆ ಬಂದು ಕೆಲವು ತಿಂಗಳು ಇದ್ದು ಹೋಗುತ್ತಿದ್ದ ಆ ಅಲೆಮಾರಿ ಕುಟುಂಬಗಳು ಈಗ ಸುಮಾರು ಹತ್ತು ವರ್ಷಗಳಿಂದ ಖಾಯಂ ಆಗಿ ಅರಸಾಳು ಗ್ರಾಮದ ರೈಲ್ವೆ ಇಲಾಖೆಗೆ ಸೇರಿದ ಖಾಲಿ ಜಾಗದಲ್ಲಿ ಟೆಂಟ್ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದ ಅಲೆಮಾರಿ ಕುಟುಂಬಗಳಿಗೆ ಸ್ವಾತಂತ್ರ್ಯ ಬಂದು 75 ವರ್ಷ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನೆಲೆ ಕಾಣದೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗೊಂದು ಸೂರು ಗುಡಿಸಲು ಮುಕ್ತ ದೇಶವನ್ನಾಗಿಸುವ ಘೋಷಣೆಯೊಂದಿಗೆ ಅಧಿಕಾರದ ಗದ್ದುಗೆ ಏರಿದರೂ ಕೂಡಾ ದೇಶದಲ್ಲಿ ಎಷ್ಟೂ ಕಡೆಗಳಲ್ಲಿ ಟೆಂಟ್ ಗುಡಿಸಲು ಮನೆಗಳಿಗೆ ಮುಕ್ತಿಯೊಂಬುದು ದೊರೆತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಮತ್ತು ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಅಲೆಮಾರಿ ಜನಾಂಗದವ ಗುಡಿಸಲು ಟೆಂಟ್ ಮನೆಗಳೇ ಪ್ರತ್ಯಕ್ಷ ಸಾಕ್ಷಿಯಾಗಿವೆ………..!

ಈ ಅಲೆಮಾರಿ ಕುಟುಂಬಗಳು ಕಳೆದ ಹತ್ತು ವರ್ಷಗಳಿಂದ ಅರಸಾಳು ಗ್ರಾಮದಲ್ಲಿ ವಾಸ ಮಾಡುತ್ತಾ ಸರ್ಕಾರದ ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಯನ್ನು ಹೊಂದಿದ್ದಾರೆ. ಆದರೆ ಅವರಿಗೆ ವಾಸಕ್ಕೊಂಡು ಸೂರು ಈವರೆಗೂ ಆಗಿಲ್ಲ…………!

ಬಯಲಿನಲ್ಲಿ ಕಟ್ಟಿಕೊಂಡಿರುವ ಟೆಂಟ್‌ಗಳಲ್ಲಿ ಮಳೆ, ಬಿಸಿಲು ಚಳಿಗಾಲದಲ್ಲಿ ಕಾಲಹಾಕುವಂತಾಗಿದ್ದರೂ ಕೂಡಾ ಇವರ ಕಡೆ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಗಮನಹರಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕೂಲಿ ಕೆಲಸಗಳಿಂದ ಜೀವನ ಈ ಅವಧಿಯಲ್ಲಾಗಿರುವ ಎಲ್ಲ ಚುನಾವಣೆಗಳಲ್ಲೂ ಮತ ನೀಡಿದ್ದಾರೆ. ಅಲೆಮಾರಿಗಳಿಂದ ಮತಪಡೆದ ಗ್ರಾಮ ಪಂಚಾಯ್ತಿಯಿಂದ ಲೋಕಸಭೆಯವರೆಗೂ ಎಲ್ಲಾ ಜನಪ್ರತಿಗಳೂ ಅಲೆಮಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸಿಕೊಡಲಾಗದಿರುವುದು ಕುತೂಹಲ ವಿಚಾರವಾಗಿದೆ.

ಒಂದು ಕಡೆ ರೈಲ್ವೆ ಇಲಾಖೆಗೆ ಸೇರಿದ ಜಾಗವೆಂದು ಅಲೆಮಾರಿ ಕುಟುಂಬಗಳ ಟೆಂಟ್ ಕಿತ್ತು ಹಾಕುತ್ತಿದ್ದರೆ ಇನ್ನೊಂದು ಕಡೆಯಲ್ಲಿ ರಾಜ್ಯ ಸರ್ಕಾರ ಅಲೆಮಾರಿ ಕುಟುಂಬಗಳವರಿಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಘೋಷಿಸಿಕೊಂಡಿದ್ದರೂ ಕೂಡಾ ಈವರೆಗೆ ಯಾವುದೇ ಪರಿಹಾರ ಒದಗಿಸಿಲ್ಲ ಎಂದು ದೂರಿದರು.

ತಲೆ ಮೇಲೊಂದು ಸೂರು ಕಲ್ಪಿಸಿ:

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದ್ದು ಇದರ ನೆನಪಿಗಾಗಿ ಅಮೃತ ಮಹೋತ್ಸವಾಚರಣೆಯ ಸಂಭ್ರಮದಲ್ಲಿರುವ ನಮ್ಮ ಆಡಳಿತ ವ್ಯವಸ್ಥೆ ಈಗಲಾದರೂ 250 ಕೋಟಿ ರೂಪಾಯಿಗಳ ಸರ್ಕಾರಿ ಅನುದಾನ ಹೊಂದಿರುವ ಅಲೆಮಾರಿ ಅಭಿವೃದ್ದಿ ನಿಗಮದ ಮೂಲಕವಾದರೂ ಈ ಅರಸಾಳುವಿನ ಅಲೆಮಾರಿ ಕುಟುಂಬಗಳಿಗೆ ತಲೆ ಮೇಲೊಂದು ಸೂರು ಕಲ್ಪಿಸಿಕೊಟ್ಟಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ನಿಜವಾದ ಅರ್ಥಬರುತ್ತದೆ ಎಂದು ಹಿರಿಯ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಅರಸಾಳು ರಂಗನಾಥ ತಮ್ಮ ಅಭಿಮತವನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು.

ಜಾಗತೋರಿಸಿದರೆ ನಿರಾಕರಿಸುತ್ತಾರೆ:

ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಬೆನವಳ್ಳಿ ಗ್ರಾಮದ ಮಜರೆ ದೂನ ಎರಡು ಕಡೆಗಳಲ್ಲಿನ ಗೌಠಾಣಾ ಜಾಗವನ್ನು ಈ ಮೇಲ್ಕಂಡ ಕುಟುಂಬಗಳಿಗೆ ತಾತ್ಕಾಲಿಕವಾಗಿ ವಾಸ ಮಾಡಲು ನಗದಿಪಡಿಸಿದರೂ ಅಲೆಮಾರಿ ಕುಟುಂಬದವರು ನಿರಾಕರಿಸುತ್ತಾ ನಮಗೆ ಅರಸಾಳಿನಲ್ಲಿ ವಾಸ ಮಾಡಲು ಮನೆ ಜಾಗ ಕೊಡಿಸಿ ಎಂದು ಹೇಳುತ್ತಾರೆಂದು ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಕೆ.ಹೆಚ್.ಗಣೇಶ್ ಮಾಧ್ಯಮದವರಿಗೆ ವಿವರಿಸಿದರು.

ಇನ್ನಾದರೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವರೆ ಕಾದು ನೋಡಬೇಕಾಗಿದೆ.

ವರದಿ: ಕೆ.ಎಂ. ಬಸವರಾಜ್ ರಿಪ್ಪನ್‌ಪೇಟೆ
ಜಾಹಿರಾತು

LEAVE A REPLY

Please enter your comment!
Please enter your name here