ಅರಾಜಕತೆ ಸೃಷ್ಟಿ ಮಾಡೋದೇ ನಾಯಕತ್ವದ ಲಕ್ಷಣ ಅಲ್ಲ: ಸಿ.ಟಿ ರವಿ

0
360

ಚಿಕ್ಕಮಗಳೂರು: ಎತ್ತಿಕಟ್ಟುವುದು, ಅರಜಾಕತೆ ಸೃಷ್ಟಿಸುವುದು ಸುಲಭ. ಅರಾಜಕತೆ ಸೃಷ್ಟಿಸುವುದೇ ನಾಯಕತ್ವದ ಲಕ್ಷಣವಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಇಷ್ಟು ದಿನ ರೈತ ನಾಯಕ, ಈಗ ಕಾರ್ಮಿಕ ನಾಯಕ. ಸಂದರ್ಭ-ಪರಿಸ್ಥಿತಿ ಅರ್ಥೈಸಿಕೊಂಡು ಬೇಡಿಕೆ ಈಡೇರಿಕೆಗೆ ಮುಂದಾಗಬೇಕು. ನೌಕರರು ಅತೀ ಒತ್ತಡ ಹೇರಿದರೆ ಸಂಬಂಧ ಹರಿದು ಹೋಗುತ್ತದೆ. ಸಂಬಂಧ ಹರಿದರೆ ಸರ್ಕಾರಕ್ಕಿಂತ ದೊಡ್ಡವರು ಯಾರೂ ಇಲ್ಲ. ಬೆದರಿಕೆ ಮೂಲಕ ಸರ್ಕಾರವನ್ನು ಮಣಿಸುವುದು ಅಸಾಧ್ಯ ಎಂದರು.

ಸರ್ಕಾರ ರೈತರ ಪರ ತೆಗೆದುಕೊಂಡ ತೀರ್ಮಾನಗಳನ್ನು ರೈತ ವಿರೋಧಿ ಎನ್ನುತ್ತಿದ್ದರು. ಸರ್ಕಾರದ ಮೂರು ಮಸೂದೆಗಳು ರೈತ ಪರವಿರುವ ಮಸೂದೆಗಳು. ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಲು ಅವಕಾಶ ಕೇಳಿದ್ದರು. ಮುಕ್ತ ಅವಕಾಶ ಸಿಕ್ಕ ಮೇಲೆ ರೈತ ವಿರೋಧಿ ಎಂದು ಹೇಳುತ್ತಾರೆ ಎಂದರು.

ಸಚಿವರು ನೌಕರರ ಜೊತೆ ಮಾತನಾಡಿ ಸಮಯ ಕೇಳಿದ್ದಾರೆ. ನೌಕರರು ಒಂದು ತಿಂಗಳು ಸಮಯ ಕೊಟ್ಟು ಕಾದು ನೋಡಬೇಕು ಎಂದು ಹೇಳಿದರು.

ಜಾಹಿರಾತು

LEAVE A REPLY

Please enter your comment!
Please enter your name here