ಅಲ್ಪಸಂಖ್ಯಾತರ ಓಲೈಕೆಗೆ ಕಾಂಪಿಟೇಷನ್ ನಡೆಯುತ್ತಿದೆ: ಸಚಿವ ಆರಗ ಜ್ಞಾನೇಂದ್ರ

0
330

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ ಕುಮಾರಸ್ವಾಮಿ ನಡುವೆ ಅಲ್ಪ ಸಂಖ್ಯಾತರ ಒಲೈಕೆ ರೇಸ್ ನಡೆದಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ಎರಡು ಪಕ್ಷದ್ದೂ ಮುಸ್ಲಿಂರ ಹೆಸರಲ್ಲಿ ರಾಜಕೀಯ ನಡೆಯುತ್ತಿದ್ದು ಚುನಾವಣೆ ಹಿನ್ನೆಲೆ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಇನ್ನೂ ಸಿದ್ದರಾಮಯ್ಯನವರು ನೈತಿಕ ಪೊಲೀಸ್ ಗಿರಿ ಕುರಿತು ಟ್ವಿಟ್ ವಿಚಾರವಾಗಿ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಹೇಳಿದ್ದು ಮಾಡಬೇಕು ಅಂತಾ ಎಲ್ಲಿಯೂ ಇಲ್ಲ. ಆರ್.ಎಸ್.ಎಸ್ ಮತ್ತು ವಿ.ಎಚ್.ಪಿ ತ್ರಿಶೂಲ್ ಬಳಕೆ ಅದು ಪ್ರತಿ ವರ್ಷ ನಡೆಯುವ ಕಾರ್ಯಕ್ರಮ. ಇದು ಸಿದ್ದರಾಮಯ್ಯನವರ ಅನಗತ್ಯವಾದ ಪ್ರಸ್ತಾಪ ಎಂದರು.

ಆರ್.ಎಸ್.ಎಸ್ ಬಗ್ಗೆ ಮಾತನಾಡಿದರೆ ಅಲ್ಪ ಸಂಖ್ಯಾತ ಮತ ಬರುತ್ತವೆ ಎಂಬ ಲೆಕ್ಕಾಚಾರದಲ್ಲಿ ಅವರು ಇಂತಹ ಹೇಳಿಕೆ ನೀಡಿದ್ದಾರೆ. ಆರ್.ಎಸ್‌.ಎಸ್ ದೇಶದ ಮೇಲೆ ಬಾಂಬ್ ಹಾಕುವರನ್ನು ತಯಾರು ಮಾಡುವುದಿಲ್ಲ. ದೇಶ ಪ್ರೀತಿ ಮಾಡುವರನ್ನು ತಯಾರು ಮಾಡುತ್ತದೆ ಎಂದರು.

ಇನ್ನೂ ಮೋದಿ ವಿರುದ್ಧ ಏಕವಚನದಲ್ಲಿ ಸಿದ್ದರಾಮಯ್ಯನವರ ಟೀಕೆಗೆ ತಿರುಗೇಟು ನೀಡಿದ ಸಚಿವರು, ಅವರ ಘನತೆ ಗೌರವ ತಕ್ಕಂತೆ ಮಾತನಾಡಲಿ. ಸಿದ್ದರಾಮಯ್ಯನವರು ರಾಜಕೀಯದಲ್ಲಿ ಹಿರಿಯರು ಇದ್ದಾರೆ. ಮೋದಿ ಬಗ್ಗೆ ಹಗುರ ಮಾತು, ಅದು ಸಿದ್ದರಾಮಯ್ಯನವರನ್ನೇ ಹಗರು ಮಾಡುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಪತನ ಬಳಿಕವೇ ರಾಜ್ಯದಲ್ಲಿ ಆಡಳಿತ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ ಅವರು, ಕುಮಾರಸ್ವಾಮಿ ರಾಮ ಮಂದಿರ ಲೆಕ್ಕ ವಿಚಾರವಾಗಿ ಮಾತನಾಡಿ, ರಾಮ ಮಂದಿರಕ್ಕೆ ಎಚ್.ಡಿ.ಕೆ ದಮ್ಡಿ ಕೊಟ್ಟಿಲ್ಲ. ರಾಮಮಂದಿರ ಹಣ ಕೊಟ್ಟವರಿಗೆ ಗೊತ್ತಿದೆ. ಅದನ್ನು ಪ್ರಾಮಾಣಿಕವಾಗಿ ಮಂದಿರ ಕಟ್ಟುತ್ತಿರುವ ಕುರಿತು ಲೆಕ್ಕ ಕೇಳಲು ಅದೇನು ಜೆಡಿಎಸ್, ಕಾಂಗ್ರೆಸ್ ಪಕ್ಷದ ಫಂಡಾ..? ಎಂದು ಪ್ರಶ್ನಿಸಿ, ಮಂದಿರ ನಿರ್ಮಾಣದ ಒಂದೊಂದು ಪೈಸೆಗೂ ಲೆಕ್ಕವಿದೆ ಇದೆಲ್ಲಾ ಎಚ್.ಡಿ.ಕೆ ಚುನಾವಣೆ ಗಿಮಿಕ್ ಎಂದು ಕಿಡಿಕಾರಿದರು.

ಜಾಹಿರಾತು

LEAVE A REPLY

Please enter your comment!
Please enter your name here