ಅಹಿಂಸಾ ತತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಮಹಾವೀರರು ; ಹೊಂಬುಜ ಶ್ರೀ

0
202

ರಿಪ್ಪನ್‌ಪೇಟೆ: ಅಹಿಂಸೆಯನ್ನು ಜಗತ್ತಿಗೆ ಸಾರಿದ ಧರ್ಮ ಜೈನಧರ್ಮ. ಜಗತ್ತಿನ ಎಲ್ಲ ಧರ್ಮವು ಭೋಧಿಸುವುದು ಅಹಿಂಸಾ ಧರ್ಮಗಳೇ ಆಗಿವೆ. ಆತ್ಮ ಶುದ್ದಿಯ ಮಾರ್ಗವನ್ನು ಬೇರೆಲ್ಲೂ ಹುಡುಕಬೇಕಿಲ್ಲ. ನಿತ್ಯ ಆಲೋಚನೆ ಮತ್ತು ವರ್ತಮಾನದ ನಡೆತೆಯಿಂದ ಆತ್ಮಶುದ್ದಿ ಕಾಣಬೇಕು ಎಂದು ಹೊಂಬುಜ ಜೈನ ಮಠಾಧೀಶ ಡಾ.ಶ್ರೀಮದ್‌ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ ಹೇಳಿದರು.

ಸಮೀಪದ ಹೊಂಬುಜ ಜೈನ ಮಠದಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಅಹಿಂಸಾ ಪರಮೋಧರ್ಮ ಎನ್ನುವ ಮೂಲ ಮಂತ್ರದಿಂದ ಜಗತ್ತಿಗೆ ಶಾಂತಿಯನ್ನು ಬೋಧಿಸಿದ ಮಹಾನ್ ಪುರುಷ. ‘ನೀನು ಜೀವಿಸು ಇತರರನ್ನು ಜೀವಿಸಲು ಬಿಡು’ ಎನ್ನುವ ಮೂಲಕ ಪ್ರತಿಯೋದು ಜೀವಿಗೂ ಬದುಕುವ ಸ್ವಾತಂತ್ರ್ಯವಿದೆ ಎಂಬುದನ್ನು ತಿಳಿಸಿದವರು.

ತಮ್ಮ ಸುಖ ಸಂಪತ್ತು ಸಿರಿತನ ಎಲ್ಲವನ್ನು ತ್ಯಜಿಸಿ 12 ವರ್ಷಗಳ ಕಠೀಣ ತಪಸ್ಸಿನಿಂದ ಆತ್ಮ ಕಲ್ಯಾಣ ಮಾಡಿಕೊಂಡು ಜನರಲ್ಲಿದ್ದ ಅಂಧಕಾರ ಮೌಢ್ಯ ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ದೂರ ಮಾಡಿ ಜನರ ಹೃದಯದಲ್ಲಿ ಜ್ಞಾನದ ಜ್ಯೋತಿ ಬೆಳಗಿದರು ಜೈನಧರ್ಮದ ಪ್ರವರ್ತಕರು ಭಗವಾನ್ ಮಹಾವೀರರು ಎಂದು ಶ್ರೀಗಳು ವಿವರಿಸಿದರು.

ಅಶಾಂತಿ ಗಲಭೆ ಹಿಂಸೆ ಜಾತೀಯತೆ ಮತ್ತು ತಾರತಮ್ಯಗಳಿಂದ ಜಗತ್ತು ತಲ್ಲಣಗೊಂಡಿದ್ದು ಸಮಾಜದಲ್ಲಿ ಪ್ರೀತಿ ವಿಶ್ವಾಸ ನಂಬಿಕೆ ಸಹನೆ ಮತ್ತು ಸಹಬಾಳ್ವೆಯನ್ನು ನಿರ್ಮಿಸುವ ಶಕ್ತಿ ಅಹಿಂಸಾ ಸಿದ್ದಾಂತಕ್ಕೆ ಇದೆ ಭಗವಾನ್ ಮಹಾವೀರರ ಸಂದೇಶಗಳು ಪ್ರಪಂಚಕ್ಕೆ ಬೆಳಕಾಗಲಿ ಎಂದು ಆಶಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here