ಆಂಜನೇಯ ದೇವಸ್ಥಾನಕ್ಕೆ ಬಂದ ಭಿಕ್ಷುಕಿ ಅಜ್ಜಿ 20 ಸಾವಿರ ರೂ. ಕೊಟ್ಟು ಹೇಳಿದ್ದು ಹೀಗೆ…

0
1205

ಕಡೂರು: ಭಿಕ್ಷುಕರ ಬಳಿ ಲಕ್ಷ ಲಕ್ಷ ಹಣ ಇರೋ ಸುದ್ದಿಗಳು ಆಗಾಗ ವರದಿ ಆಗುತ್ತಿರುತ್ತವೆ‌ ಸಾಮಾನ್ಯ ಕೆಲ ಭಿಕ್ಷುಕರು ಸಾವನ್ನಪ್ಪಿದ ಬಳಿಕ ಅವರ ಬಳಿಯಲ್ಲಿರುವ ಅಪಾರ ಹಣದ ವಿಷಯ ಬೆಳಕಿಗೆ ಬರುತ್ತದೆ. ಇನ್ನು ಕೆಲ ಭಿಕ್ಷುಕರು ತಮ್ಮ ಜೀವಮಾನದಡಿ ಸಂಗ್ರಹಿಸಿದ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಲು ನೀಡುತ್ತಾರೆ. ಅಂತಹುವುದೇ ಒಂದು ಹೃದಯ ಸ್ಪರ್ಶಿ ಘಟನೆಗೆ ಪಟ್ಟಣ ಸಾಕ್ಷಿಯಾಗಿದೆ.

ಈ ಅಜ್ಜಿಯ ಹೆಸರು ಕೆಂಪಜ್ಜಿ. ಪಟ್ಟಣದ ಸಾಯಿಬಾಬಾ ದೇವಸ್ಥಾನದ ಬಳಿ ಭಿಕ್ಷೆ ಕೇಳುತ್ತಿರುತ್ತಾರೆ. ಸಾಯಿಬಾಬಾ ಮಂದಿರಕ್ಕೆ ಹೋಗುವ ಜನಕ್ಕೆ ಈ ಅಜ್ಜಿಯ ಮುಖ ಪರಿಚಯ ಇದ್ದೆ ಇರುತ್ತದೆ. ಈಗ ಈ ಕೆಂಪಜ್ಜಿಯ ಕೆಲಸ ಕಂಡು ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಅಜ್ಜಿ ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ದೇವಸ್ಥಾನಕ್ಕೆ ಒಳ ಬರುತ್ತಿರೋದನ್ನು ಕಂಡು ಕೆಲವರು ಗದರಿದ್ದಾರೆ, ದೇವಸ್ಥಾನದ ಒಳಗೆಯೇ ಭಿಕ್ಷೆ ಕೇಳಲು ಬಂದಿರಬಹುದು ಎಂದು ಹೊರಗೆ ಕಳುಹಿಸಲು ಪ್ರಯತ್ನಿಸಿದ್ದಾರೆ, ಆದರೆ ದೇವಸ್ಥಾನದಲ್ಲಿ ಅಜ್ಜಿಯ ಕಣ್ಣುಗಳು ಹುಡುಕುತ್ತಿದ್ದು ಬೇರೆನೇ ಅನ್ನೋದು ಯಾರಿಗೂ ಗೊತ್ತಾಗಲಿಲ್ಲ.

ಜನರು ಹೊರಗೆ ಹೋಗವಂತೆ ಹೇಳಿದ್ರೂ ಕೆಂಪಜ್ಜಿ ಮಾತ್ರ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಹುಡುಕುತ್ತಿದ್ದರು. ಕೊನೆಗೆ ಅಜ್ಜಿ ದೇವಸ್ಥಾನದ ಒಳಕ್ಕೆ ಹೋಗಿ ಸ್ವಾಮೀಜಿಗಳ ಕೈಯಲ್ಲಿ 500 ರೂಪಾಯಿಯ 40 ನೋಟುಗಳನ್ನು ನೀಡಿ ಒಂದು ಮಾತು ಹೇಳಿದ್ದಾರೆ.

ಸ್ವಾಮೀಜಿಗಳ ಬಳಿ ಅಜ್ಜಿ ಹೇಳಿದ ಮಾತು ಕೇಳಿ ಅಲ್ಲಿದ್ದವರೆಲ್ಲ ಮೂಕ ವಿಸ್ಮಿತರಾಗಿದ್ದರು. ಸ್ವಾಮೀಜಿಗಳು ಕೆಂಪಜ್ಜಿ ನೀಡಿರುವ ಈ 20 ಸಾವಿರ ರೂಪಾಯಿ ಅತ್ಯಮೂಲ್ಯವಾದದ್ದು ಎಂದು ಹೇಳಿದ್ದಾರೆ. ಹೊರಗೆ ಹೋಗುವಂತೆ ಹೇಳುತ್ತಿದ್ದವರೇ ಅಜ್ಜಿಯ ಬಳಿ ಸೆಲ್ಫಿ ಕೇಳಿದ್ದಾರೆ. ಹಾಗಾದ್ರೆ ಅಜ್ಜಿ ಸ್ವಾಮೀಜಿಗಳ ಬಳಿ ಹೇಳಿದ ಮಾತು ಏನು ಅಂತೀರಾ ಇಲ್ಲಿದೆ ಅದಕ್ಕೆ ಉತ್ತರ.

ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನದ ಸ್ವಾಮೀಜಿಗಳ ಕೈಗೆ 20 ಸಾವಿರ ರೂಪಾಯಿ ನೀಡಿದ ಅಜ್ಜಿ ಒಂದು ಮಾತು ಹೇಳಿದ್ದರು.ಈ ಹಣದಿಂದ ಆಂಜನೇಯ ವಿಗ್ರಹಕ್ಕೆ ಬೆಳ್ಳಿಯ ಮುಖವಾಡ ಮಾಡಿಸಿ ಎಂದು ಮನವಿ ಮಾಡಿಕೊಂಡಿದ್ದರು.

ದೇವಸ್ಥಾನಕ್ಕೆ ಭಕ್ತಾದಿಗಳು ಲಕ್ಷ ಲಕ್ಷ ಹಣ ನೀಡಿರಬಹುದು. ಆದರೆ ಕೆಂಪಜ್ಜಿ ನೀಡಿದ ಈ ಮೊತ್ತ ಅತ್ಯಮೂಲ್ಯವಾದ್ದು, ಅಜ್ಜಿಯ ಇಚ್ಛೆಯಂತೆ ಬೆಳ್ಳಿಯ ಮುಖವಾಡ ಮಾಡಿಸಲಾಗುವುದು ಎಂದು ಸ್ವಾಮೀಜಿಗಳು ಹೇಳಿದ್ದಾರೆ‌.

ಜಾಹಿರಾತು

LEAVE A REPLY

Please enter your comment!
Please enter your name here