ಆಂಜನೇಯ ಸ್ವಾಮಿ ನಯ-ವಿನಯದ ಪ್ರತೀಕಾ

0
288

ರಿಪ್ಪನ್‌ಪೇಟೆ: ಕೆಳದಿ ಶಿವಪ್ಪನಾಯಕ ಮತ್ತು ಚನ್ನಮ್ಮಾಜಿ ಅವರು ಆಳಿದ ಈ ಪ್ರದೇಶದಲ್ಲಿ ಶಾಂತರಸರು ತ್ಯಾಗಕ್ಕೆ ಮಹತ್ವವನ್ನು ನೀಡಿವರು ಅವರ ಕಾಲನಂತರದಲ್ಲಿ ಹೊಂಬುಜ ಜೈನ ಮಠವು ತನ್ನದೇ ಆದ ಅಹಿಂಸಾ ತತ್ವ ಬೋಧನೆಯೊಂದಿಗೆ ಸಕಲ ಜೀವಾತ್ಮರಲ್ಲಿ ಲೇಸು ಬಯಸಿದವರು ಎಲ್ಲ ಧರ್ಮೀಯರಲ್ಲಿ ಶಾಂತಿ ಸಾಮರಸ್ಯದೊಂದಿಗೆ ಸಹಬಾಳ್ವೆಯಿಂದ ನಡೆದುಕೊಂಡವರು ಅವರು ಹೊಂಬುಜದಲ್ಲಿ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿರುವುದು

ಕ್ಷೇತ್ರದ ವ್ಯಾಪ್ತಿಯಲ್ಲಿ ಧಾರ್ಮಿಕ ಮನೋಭಾವನೆ ಬೆಳಸಲು ಕಾರಣರಾಗಿದ್ದಾರೆಂದು ಆನಂದಪುರ ಮುರುಘಾಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಶ್ರೀ ಆಂಜನೇಯ ಸ್ವಾಮಿ ನೂತನ ದೇವಸ್ಥಾನ ಹಾಗೂ ಆಂಜನೇಯ ಮೂರ್ತಿ ಪುನರ್‌ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿ, ಆಂಜನೇಯ ಸ್ವಾಮಿ ನಯ-ವಿನಯ ಸೇವಾ ಮನೋಭಾವದೊಂದಿಗೆ ಶ್ರೀರಾಮನವರಲ್ಲಿ ಸ್ವಾಮಿನಿಷ್ಠೆಯ ಪರಾಕಾಷ್ಟೆತೆಯ ಪ್ರತೀಕ ಎಂದರು.

ಹೊಂಬುಜ ಜೈನ ಮಠದ ಜಗದ್ಗುರು ಡಾ.ಶ್ರೀಮದ್ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿ ಧರ್ಮಸಭೆಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಆಂಜನೇಯ ಸ್ವಾಮಿ ರಾಮನ ಭಂಟನಾಗಿ ಹನುಮಂತ ತನ್ನ ಗುರುವಿಗೆ ಸ್ವಾಮಿನಿಷ್ಠೆಯ ಪರಾಕಾಷ್ಠೆತೆಯನ್ನು ಮೆರೆದ ಅಂಜನೇಯನನ್ನು ನೆನೆದರೆ ಬದುಕು ಪಾವನ ಅವನ ತತ್ವಗಳು ನಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಪುಣ್ಯ ಪ್ರಾಪ್ತಿಯಾಗುವುದು ಇತ್ತೀಚಿನ ದಿನಮಾನಗಳಲ್ಲಿ ದೇವರು ಧರ್ಮದ ಅಚರಣೆಗಳಿಂದ ಯುವಜನರು ವಿಮುಖರಾಗುತ್ತಿದ್ದಾರೆ ಇದರಿಂದಾಗಿ ಅಶಾಂತಿಯ ವಾತವರಣ ಸೃಷ್ಠಿಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿ, ಕಳೆದ ಎರಡು ಮೂರು ವರ್ಷಗಳಿಂದ ಕೊರೊನಾ ರೋಗದಿಂದಾಗಿ ಜಗತ್ತು ತಲ್ಲಣಗೊಳಿಸಿದ್ದು ಅಚರಣೆಗಳು ಇಲ್ಲದತ್ತಾಗಿದ್ದು ಧರ್ಮ ಧಾರ್ಮಿಕ ಆಚರಣೆಗಳಿಂದ ದೇಶದಲ್ಲಿ ಶಾಂತಿ ನೆಮ್ಮದಿ ಕಾಣಬಹುದಾಗಿದೆ ಎಂದರು.

ಸರ್ವ ಧರ್ಮ ಶಾಂತಿ ಸಹಬಾಳ್ವಯೊಂದಿಗೆ ಗ್ರಾಮದಲ್ಲಿ ಎಲ್ಲರೂ ಸಹಕಾರ ಮನೋಭಾವನೆಯಲ್ಲಿ ಬದುಕುವಂತಾಗಬೇಕು ಎಂದ ಅವರು ರಾಮನ ವಿಹಾರಕ್ಕೆ ಅಳಿಲು ಸೇವೆ ಎಂಬಂತೆ ತಮ್ಮ ನಿತ್ಯ ಬಂದ ಆದಾಯದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಮತ್ತು ಧರ್ಮ ಕಾರ್ಯಗಳಿಗೆ ವಿನಿಯೋಗಿಸಲು ಎಲ್ಲರ ಸಹಕಾರ ಅಗತ್ಯವೆಂದರು.

ನಿಟ್ಟೂರು ಈಡಿಗ ನಾರಾಯಣಗುರು ಮಹಾಸಂಸ್ಥಾನಮಠದ ಶ್ರೀರೇಣುಕಾನಂದ ಮಹಾಸ್ವಾಮಿಜೀ ಧರ್ಮಸಭೆಯಲ್ಲಿ ಪಾಲ್ಗೊಂಡು ಆಶಿರ್ವಚನ ನೀಡಿದರು.

ಹುಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಲ್ಲವಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಆಂಜನೇಯ ಸ್ವಾಮಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಅಶ್ವತ್ಥನಾರಾಯಣ ಅಧ್ಯಕ್ಷತೆ ವಹಿಸಿದ್ದರು.

ಜೆ.ಪಿ.ಕಿರಣ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಜಿ.ಮಂಜಪ್ಪ, ಶಿಕ್ಷಕ ದಿನೇಶ್ ನಿರೂಪಿಸಿದರು. ಪ್ರಶಾಂತ ವಂದಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here