ಆದಾಯ ವೃದ್ಧಿಗೆ ನೂತನ ಕೃಷಿಕಾಯ್ದೆ ಸಹಕಾರಿ: ಕಲ್ಮರುಡಪ್ಪ

0
184

ಚಿಕ್ಕಮಗಳೂರು: ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿಕಾಯ್ದೆಗಳು ಸಹಕಾರಿಯಾಗಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ. ಕಲ್ಮರುಡಪ್ಪ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿ, ನೂತನ ಕೃಷಿಕಾಯ್ದೆಗಳು ಮಾರಕವಾಗಲಿವೆ ಎಂದು ತಿಳಿಸುವ ಮೂಲಕ ರೈತ ಸಂಘಗಳು ರೈತರನ್ನು ದಾರಿತಪ್ಪಿಸುವ ಮೂಲಕ ಭಾರತ ಬಂದ್‍ಗೆ ಮುಂದಾಗಿದ್ದು, ಜಿಲ್ಲೆಯಲ್ಲಿ ವರ್ತಕರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು ಸ್ಪಂದಿಸುವುದಿಲ್ಲವೆಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ನಂತರ ರೈತರಲ್ಲಿ ಮಂದಹಾಸ ಮೂಡಿದೆ. ಕೃಷಿ ಕಾಯ್ದೆ 6 ವರ್ಷಗಳ ಕಾಲ 7 ಜನ ಮುಖ್ಯಮಂತ್ರಿಗಳ ಸಮಿತಿಯನ್ನು ರಚಿಸಿ ಅಲ್ಲಿ ಸಾಧಕ ಬಾಧಕಗಳನ್ನು ಚರ್ಚಿಸಿ ತೆಗೆದುಕೊಂಡಿರುವ ನಿರ್ಧಾರವಾಗಿದೆ ಎಂದು ನುಡಿದರು.

ದೇಶದಲ್ಲಿ ರೈತರು ಎರಡು ಸಮಸ್ಯೆಗಳಲ್ಲಿ ಜೀವಿಸುತ್ತಿದ್ದಾರೆ. ಒಂದು ಖಾಸಗಿ ಉದ್ಯಮಿಗಳು ಉತ್ಪಾದಿಸುವಾಗ ಹಾಗೂ ಮತ್ತೊಂದು ಮಾರಾಟ ಮಾಡುವಾಗ ಮಧ್ಯವರ್ತಿಗಳಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಹಕರು ಹೆಚ್ಚಿನ ಹಣ ಪಾವತಿಸುತ್ತಿದ್ದಾರೆ, ರೈತರು ಕಡಿಮೆ ಪಡೆಯುತ್ತಿದ್ದಾರೆ. ಇದಕ್ಕೆಲ್ಲ ಅಸಮರ್ಪಕ ದಾಸ್ತಾನು ವ್ಯವಸ್ಥೆ, ಸಾಗಣೆ ಹಾಗೂ ಮಧ್ಯವರ್ತಿಗಳಿಗೆ ವ್ಯಯಿಸುವ ಹೆಚ್ಚಿನ ಹಣವೇ ಕಾರಣವಾಗಿದೆ. ಇದಕ್ಕೆಲ್ಲ ಮುಕ್ತಿ ನೀಡಲು ನೂತನಕೃಷಿ ಕಾಯ್ದೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಕೇಂದ್ರ ಸರ್ಕಾರ, ಕೇಂದ್ರ ಸಚಿವರು ಮತ್ತು ರಾಜ್ಯ ಸರ್ಕಾರಗಳು ಯಶಸ್ಸಿನತ್ತ ಮುನ್ನುಗುತ್ತಿವೆ. ವಿರೋಧ ಪಕ್ಷಗಳು ಕೃಷಿ ಕಾಯ್ದೆಯ ವಿರುದ್ಧ ರೈತರಲ್ಲಿ ಗೊಂದಲ ಸೃಷ್ಠಿ ಮಾಡುತ್ತಾ ಈ ಕಾಯ್ದೆ ಅನುಷ್ಠಾನಕ್ಕೆ ಬಂದರೆ ಕನಿಷ್ಠ ಬೆಂಬಲ ಬೆಲೆ ರದ್ದು ಮಾಡುತ್ತಾರೆಂದು ಗುಲ್ಲೆಬ್ಬಿಸಿದರು. ಆದರೆ, ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವುದು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗಿದೆ ಹಾಗೂ ಖರೀದಿ ಕೇಂದ್ರಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಇದೊಂದೇ ಸಾಕು ವಿರೋಧ ಪಕ್ಷಗಳಿಗೆ ಕಾಯ್ದೆಯ ವಿಚಾರದಲ್ಲಿ ಅರಿವಿಲ್ಲ ಎಂದು ತೋರ್ಪಡಿಸುತ್ತದೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here